Tuesday, November 26, 2024
ಸುದ್ದಿ

ಅನುತೀರ್ಣ ವಿದ್ಯಾರ್ಥಿಗೆ ‘ಐ ಲವ್ ಯೂ’ ಎಂದ ಶಿಕ್ಷಕ – ಕಹಳೆ ನ್ಯೂಸ್

ಬೆಂಗಳೂರು : ಶಿಕ್ಷಕನೋರ್ವ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣಳಾದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ವಿದ್ಯಾರ್ಥಿನಿ ಪೋಷಕರು ದೂರು ನೀಡಿದ್ದಾರೆ. ಈ ಸಂಬಂಧ ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ದೂರು ದಾಖಲಾಗಿದೆ.

ಶಿಕ್ಷಕನನ್ನು ಜಿಲ್ಲೆಯ ಪ್ರೌಢ ಶಾಲೆಯ ಮೇಘನಾಥ್ ಎಂದು ಗುರುತಿಸಲಾಗಿದೆ. ದೂರಿನಲ್ಲಿ ‘ಅನುತ್ತೀರ್ಣಗೊಂಡ ವಿದ್ಯಾರ್ಥಿನಿಗೆ ಶಿಕ್ಷಕ ಸಾಂತ್ವನ ಹೇಳುವ ನೆಪದಲ್ಲಿ ‘ಐ ಲವ್ ಯೂ’ ಎಂದಿದ್ದಾನೆ. ಈ ವಿಚಾರವನ್ನು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಶಿಕ್ಷಕ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು