Sunday, January 19, 2025
ಸುದ್ದಿ

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಾಳೆ ಎರಡನೇ ಹಂತದ ಸ್ವಚ್ಛ ಪುತ್ತೂರು ಅಭಿಯಾನಕ್ಕೆ ಚಾಲನೆ – ಶ್ರೀಕೃಷ್ಣ ಉಪಾಧ್ಯಾಯ

 

ಪುತ್ತೂರು : ಮಂಗಳೂರಿನ ರಾಮಕೃಷ್ಣ ಮಿಷನ್ ನ ಮಾರ್ಗದರ್ಶನದಲ್ಲಿ ಟೀಮ್ ಸ್ವಚ್ಛ ಪುತ್ತೂರು ನಡೆಸುತ್ತಿರುವ ಸ್ವಚ್ಛತಾ ಜಾಗೃತಿ ಕಾರ್ಯಕ್ರಮದ ಎರಡನೆಯ ಹಂತವು ಡಿಸೆಂಬರ್ 10 ಭಾನುವಾರದಂದು ಮಿನಿವಿಧಾನಸೌಧದ ಮುಂದುಗಡೆ ಗಣ್ಯರ ಸಮಕ್ಷ ಚಾಲನೆಗೊಳ್ಳಲಿದೆ.ಕಳೆದ ವರುಷ ಬೀದಿಗಿಳಿದು ಕಸವಿಲೇವಾರಿ ಮಾಡುವ ಶ್ರಮದಾನದ ಕೆಲಸ ಮಾತ್ರ ನಡೆಯುತ್ತಿತ್ತು.ಆದರೆ ಈ ವರುಷ ರಾಮಕೃಷ್ಣ ಮಿಷನ್ ಪುತ್ತೂರಿನ ವಿವಿಧ ಸಂಘಟನೆಗಳ ಸದಸ್ಯರುಗಳ ಸಹಕಾರದೊಂದಿಗೆ ಪ್ರತೀ ಭಾನುವಾರ ಕನಿಷ್ಠ ನೂರು ಮನೆಗಳಿಗೆ ಭೇಟಿ ಕೊಟ್ಟು ಪುತ್ತೂರಿನ ಸೌಂದರ್ಯವನ್ನು ಉಳಿಸಿಕೊಳ್ಳುತ್ತಾ ಪುತ್ತೂರಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮನವಿ ಮಾಡಿಕೊಳ್ಳುವ ವಿನೂತನ ಆಯಾಮವೂ ಇರುತ್ತದೆ.ಜೊತೆಗೆ ಹೈಸ್ಕೂಲ್ ‌ಮಕ್ಕಳಿಗೆ ಸ್ವಚ್ಛತೆಯ ಕುರಿತು ಜಾಗೃತಿ ಭಾಷಣಗಳು, ಸ್ವಚ್ಛತೆಯ ಕುರಿತು ಮಕ್ಕಳಿಗೆ ಸ್ಪರ್ಧೆಗಳು, ಸ್ವಚ್ಛತೆಯ ಕುರಿತು ಕಲಾಮೇಳಗಳನ್ನೂ ನಡೆಸಲಿದೆ.ಶ್ರಮದಾನವೂ ಕಳೆದ ವರುಷದಂತೆಯೇ ಮುಂದುವರಿಯಲಿದೆ.ಶ್ರಮದಾನಕ್ಕೆ ಬರುವ ಕಾರ್ಯಕರ್ತರಿಗೆ ಉಚಿತವಾಗಿ ಸ್ವಚ್ಛ ಭಾರತ್ ಲೋಗೋ ಇರುವ ಟೀಶರ್ಟ್,ಉಪಹಾರ ಮತ್ತು ಪಾನೀಯದ ವ್ಯವಸ್ಥೆಯನ್ನೂ ಸೇರಿಸಿ ಗ್ಲೌಸ್,ಹಾರೆ,ಪಿಕಾಸುಗಳು,ಬುಟ್ಟಿ, ತ್ಯಾಜ್ಯ ವಿಲೇವಾರಿಗಾಗಿ ವಾಹನದ ವ್ಯವಸ್ಥೆಯನ್ನು ಕೂಡ ರಾಮಕೃಷ್ಣ ಮಿಷನ್ ಮಾಡಿಕೊಡಲಿದೆ.
-ಶ್ರೀಕೃಷ್ಣ ಉಪಾಧ್ಯಾಯ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response