ಸ್ಟಾರ್ ನಟರ ಮಕ್ಕಳ ಮದುವೆ ಅಂದ್ರೆ ಸಂಭ್ರಮ ತುಸು ಜೋರಾಗಿಯೇ ಇರುತ್ತೆ. ಇದೀಗ ಸ್ಯಾಂಡಲ್ವುಡ್ನ ದೊಡ್ಮನೆ ಫ್ಯಾಮಿಲಿಯಿಂದ ಮದುವೆಗೆ ಭರದ ಸಿದ್ಧತೆ ನಡೆಯುತ್ತಿದೆ. ಹೌದು, ಕಳೆದ ವರ್ಷವಷ್ಟೇ ನಟ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಶ್ರೀದೇವಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಇದೀಗ ಈ ಜೋಡಿಯ ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ.
ಇದೇ ತಿಂಗಳ ಕೊನೆಯಲ್ಲಿ ಮದುವೆ ನಡೆಯಲಿದೆ. ಹಾಗಾಗಿ ಅಣ್ಣ ವಿನಯ್ ರಾಜ್ ಕುಮಾರ್ ಸಂಬಂಧಿಗಳು, ಕಲಾವಿದರು, ಗಣ್ಯರ ಮನೆಗಳಿಗೆ ಭೇಟಿ ಕೊಟ್ಟು ತಮ್ಮನ ಮದುವೆಗೆ ಆಮಂತ್ರಣ ನೀಡುತ್ತಿದ್ದಾರೆ. ಇತ್ತೀಚಿಗಷ್ಟೇ ನಟ ಸತೀಶ್ ನೀನಾಸಂ ಮನೆಗೆ ತೆರಳಿ ಲಗ್ನಪತ್ರಿಕೆಯ ಜೊತೆಯಲ್ಲಿ ಗಿಡವನ್ನು ನೀಡೋ ಮೂಲಕ ಆಹ್ವಾನ ನೀಡಿದ್ರು. ಈ ಬಗ್ಗೆ ಸತೀಶ್ ಕೂಡ ಸಂತಸ ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ ನಟ ರವಿಚಂದ್ರನ್ ಮಗಳು ಗೀತಾಂಜಲಿ ಕೂಡ ಸಪ್ತಪದಿ ತುಳಿಯಲಿದ್ದು ರವಿಮಾಮ ಕೂಡ ಮದುವೆ ಆಮಂತ್ರಣ ನೀಡುವಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಬಾರಿ ಬಿಗ್ ಸ್ಟಾರ್ ಮಕ್ಕಳ ಮದುವೆ ಒಂದೇ ಸಮಯದಲ್ಲಿ ನಡೀತಾ ಇರೋದು ಸ್ಯಾಂಡಲ್ವುಡ್ ಮಂದಿಗೆ ಹಬ್ಬದ ಸಂಭ್ರಮ ತಂದಿದೆ.