Wednesday, November 27, 2024
ಸುದ್ದಿ

ಸಿಎಂ ಯೋಗಿಗೆ ಚುನಾವಣಾ ಆಯೋಗ ಮತ್ತೆ ನೋಟಿಸ್..! – ಕಹಳೆ ನ್ಯೂಸ್

ನವದೆಹಲಿ: ಪ್ರತಿ ಪಕ್ಷದವರನ್ನ ಬಾಬರ್ ಕೀ ಔಲಾದ್ ಎಂದಿದ್ದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ. 24 ಗಂಟೆಗಳಲ್ಲಿ ಯೋಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಅಂತ ಆಯೋಗ ಸೂಚನೆ ನೀಡಿದೆ. ಕಳೆದ ಏಪ್ರಿಲ್ 5ರಂದು ಭಾರತದ ಸೇನೆಯನ್ನು ಯೋಗಿ ಆದಿತ್ಯನಾಥ್, ‘ಮೋದಿಯ ಸೇನೆ’ ಎಂದು ಸಂಬೋಧಿಸಿ ವಿರೋಧ ಪಕ್ಷಗಳ ಕೆಂಗಣ್ಣಿಗೆ ಕಾರಣರಾಗಿದ್ದರು. ಅಲ್ಲದೇ ಆಯೋಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 72 ಗಂಟೆಗಳ ಕಾಲ ಕ್ಯಾಂಪೇನ್ ಮಾಡದಂತೆ ತಡೆ ನೀಡಿ ಕ್ರಮ ಕೈಗೊಂಡಿತ್ತು. ಬ್ಯಾನ್ ಬಳಿಕ ಮೊದಲ ಬಾರಿಗೆ ನಡೆಸಿದಲ್ಲೇ ಮತ್ತೆ ಯೋಗಿ, ವಿಪಕ್ಷಗಳ ನಾಯಕರ ಬಗ್ಗೆ ಬಾಬರ್ ಕಿ ಔಲಾದ್ ಅಂತ ವ್ಯಂಗ್ಯವಾಡಿದ್ರು. ಇದರ ವಿರುದ್ಧವೂ ದೂರು ದಾಖಲಾಗಿತ್ತು. ಹೀಗಾಗಿ ಈಗ ಮತ್ತೆ ನೋಟಿಸ್ ನೀಡಿದ್ದು, ಸೂಕ್ತ ಉತ್ತರ ನೀಡದಿದ್ದಲ್ಲಿ, ಯೋಗಿಗೆ ಶಿಸ್ತು ಕ್ರಮದ ಭೀತಿ ಎದುರಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು