Recent Posts

Monday, January 20, 2025
ಸಿನಿಮಾಸುದ್ದಿ

‘ಮುನಿರತ್ನ ಕುರುಕ್ಷೇತ್ರ’ ಬಗ್ಗೆ ಬಾಯಿಬಿಟ್ಟ ಮುನಿರತ್ನ – ಕಹಳೆ ನ್ಯೂಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ ಎಂದೇ ಬಿಂಬಿತವಾಗಿರುವ ಹಾಗೂ ಕನ್ನಡ ಚಿತ್ರರಂಗದ ಬಹುದೊಡ್ಡ ಸಿನಿಮಾ ಎಂದು ಹೇಳಿಕೊಂಡಿರುವ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಬಗ್ಗೆ ನಿರ್ಮಾಪಕ ಮುನಿರತ್ನ ಎಕ್ಸ್ ಕ್ಲೂಸಿವ್ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ಮುನಿರತ್ನ ಸ್ಪಷ್ಟಪಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ತೆರೆಕಾಣಲಿದ್ದು, ಎಲ್ಲ ಭಾಷೆಯಲ್ಲೂ 3ಡಿ ರೂಪದಲ್ಲಿ ಬರುತ್ತಂತೆ. ನಾಲ್ಕು ಭಾಷೆಯ ಚಿತ್ರದ ಪೋಸ್ಟರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಏನೂ ಆಕರ್ಷಣೀಯ ಅಂಶವಿರಲಿಲ್ಲ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್‌ಗಳು ಸದ್ದು ಮಾಡಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ನಾಲ್ಕು ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ಸಿದ್ಧವಾಗಿದೆ. ಕನ್ನಡ ವರ್ಷನ್ ಸೆನ್ಸಾರ್ ಕೂಡ ಆಗಿದೆಯಂತೆ. ಉಳಿದ ಮೂರು ಭಾಷೆ ಮುಂದಿನ ವಾರ ಸೆನ್ಸಾರ್ ಗೆ ಹೋಗುತ್ತಿದೆ. ಹಿಂದಿ ವರ್ಷನ್ ಹದಿನೈದು ದಿನದಲ್ಲಿ ಮುಗಿಯುತ್ತೆ. ಅಮೇರಿಕಾ ಒಂದರಲ್ಲೇ ಐದು ಭಾಷೆಯಲ್ಲೂ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಮಾಡಲಾಗಿದೆಯಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಐದು ಭಾಷೆಯ ಪ್ರಿಂಟ್ 3ಡಿ ವ್ಯವಸ್ಥೆಯಲ್ಲಿ ಸಿದ್ಧವಾಗಿ ಮುನಿರತ್ನ ಅವರ ಕೈ ಸೇರಿದ ಮೇಲಷ್ಟೇ ಬಿಡುಗಡೆಯ ದಿನಾಂಕವನ್ನ ಪ್ರಕಟ ಮಾಡಲಿದ್ದಾರಂತೆ. ಬಹುಕೋಟಿಯಲ್ಲಿ ತಯಾರಾಗಿರುವ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾವನ್ನ ನಾಗಣ್ಣ ನಿರ್ದೇಶನ ಮಾಡಿದ್ದಾರೆ. ಅಂಬರೀಶ್, ಅರ್ಜುನ್ ಸರ್ಜಾ, ಸೋನು ಸೂದ್, ನಿಖಿಲ್ ಕುಮಾರ್ ಮೇಘನಾ ರಾಜ್, ಹರಿಪ್ರಿಯ, ಸ್ನೇಹಾ ಸೇರಿದಂತೆ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿದೆ.