Recent Posts

Monday, January 20, 2025
ಸುದ್ದಿ

ಬಾಲಿವುಡ್‍ನಲ್ಲಿ ಕಾರ್ಗಿಲ್ ವೀರನ ಕಥೆ: ಶೆರ್ಷಾ – ಕಹಳೆ ನ್ಯೂಸ್

ಒಂದರ ನಂತರ ಒಂದರಂತೆ ಬಾಲಿವುಡ್‍ನಲ್ಲಿ ಬಯೋಪಿಕ್ ಚಿತ್ರಗಳ ಅಬ್ಬರ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಹೊಸ ಸೇರ್ಪಡೆ ‘ಶೇರ್ಷಾ’. ಭಾರತದ ಇತಿಹಾಸದಲ್ಲಿ ಅವಿಸ್ಮರಣೀಯವಾಗಿರುವ ಕಾರ್ಗಿಲ್ ಹೋರಾಟದ ಕಥನದಲ್ಲಿ, ಹೆಬ್ಬುಲಿಯಂತೆ ಹೋರಾಡಿ ವೀರಮರಣವನ್ನಪ್ಪಿದ ಸೇನಾನಿ ವಿಕ್ರಮ್ ಬಾತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಕ್ರಮ್ ಬಾತ್ರ ಹೋರಾಟದ ಕುರಿತಾಗಿ ಬಾಲಿವುಡ್‍ನಲ್ಲಿ ಚಿತ್ರವೊಂದು ಸೆಟ್ಟೇರುವುದಾಗಿ ಕೆಲ ತಿಂಗಳುಗಳ ಹಿಂದೆಯೇ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಚಿತ್ರಕ್ಕೆ ಯಾವುದೇ ಶಿರ್ಷಿಕೆಯನ್ನಿಟ್ಟಿರಲಿಲ್ಲ. ಇದೀಗ ಚಿತ್ರೀಕರಣವನ್ನು ಆರಂಭಿಸಲು ಸಜ್ಜಾಗಿರುವ ಚಿತ್ರತಂಡ ‘ಶೇರ್ಷಾ’ ಎಂದು ಶೀರ್ಷಿಕೆಯನ್ನಿಟ್ಟು ಸಿನಿರಸಿಕರ ಕುತೂಹಲವನ್ನು ಕೆರಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ವಿಕ್ರಮ್ ಬಾತ್ರಾ ಪಾತ್ರವನ್ನು ಸಿದ್ಧಾರ್ಥ್ ಮಲ್ಹೋತ್ರ ಮಾಡುತ್ತಿದ್ದಾರೆ. ಹಾಗೂ ಚಿತ್ರದಲ್ಲಿ ಕಿಯಾರ ಅದ್ವಾನಿಯೂ ಇರಲಿದ್ದಾರೆ. ಆದರೆ ಕಿಯಾರ ಯಾವ ಪಾತ್ರವನ್ನು ಮಾಡಲಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಚಿತ್ರವನ್ನು ಕರಣ್ ಜೋಹರ್ ತಮ್ಮ್ ಧರ್ಮ ಪ್ರೊಡಕ್ಷನ್ ಬ್ಯಾನರ್‍ನಡಿಯಲ್ಲಿ ನಿರ್ಮಿಸುತ್ತಿದ್ದು, ವಿಷ್ಣು ವರ್ಧನ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ.