Wednesday, November 27, 2024
ಸುದ್ದಿ

ದೇಶದಾದ್ಯಂತ ಡೆಬಿಟ್ ಕಾರ್ಡ್ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ – ಕಹಳೆ ನ್ಯೂಸ್

ಕಳೆದ ಐದು ವರ್ಷಗಳಲ್ಲಿ ದೇಶದಾದ್ಯಂತ ಡೆಬಿಟ್ ಕಾರ್ಡ್ ಬಳಕೆದಾರರ ಸಂಖ್ಯೆಯಲ್ಲಿ ದುಪಟ್ಟು ಏರಿಕೆಯಾಗಿದ್ದು, ಪ್ರಸ್ತುತ 94 ಕೋಟಿ ಡೆಬಿಟ್ ಕಾರ್ಡ್‍ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ವರದಿಯೊಂದು ಹೇಳಿದೆ. 2014 ರ ಆಗಸ್ಟ್ ನಲ್ಲಿ ಜನ್ ಧನ್ ಯೋಜನೆ ಜಾರಿಯಾದ ಬಳಿಕ ಈ ಮಟ್ಟಿಗಿನ ಏರಿಕೆ ಕಂಡು ಬಂದಿದೆ ಎನ್ನಲಾಗಿದೆ.

ಐದು ವರ್ಷಗಳ ಹಿಂದೆ 42 ಕೋಟಿ ಡೆಬಿಟ್ ಕಾರ್ಡ್‍ಗಳು ಬಳಕೆಯಲ್ಲಿದ್ದು, ಆ ಸಂದರ್ಭದಲ್ಲಿ 1.70 ಲಕ್ಷ ಎಟಿಎಂಗಳು ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದು, ಐದು ವರ್ಷಗಳ ಬಳಿಕ ಡೆಬಿಟ್ ಕಾರ್ಡ್ ಗಳ ಸಂಖ್ಯೆ ದುಪ್ಪಟ್ಟಾಗಿದ್ದರೂ ಎಟಿಎಂಗಳ ಸಂಖ್ಯೆಯಲ್ಲಿ ಮಾತ್ರ ಶೇಕಡ 20 ಏರಿಕೆಯಾಗಿದೆ. ಪ್ರಸ್ತುತ 2.02 ಲಕ್ಷ ಎಟಿಎಂಗಳು ಕಾರ್ಯ ನಿರ್ವಹಿಸುತ್ತಿವೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು