ಹೊನ್ನಾವರ : ಹೊನ್ನಾವರದಲ್ಲಿ ಕಾಣೆಯಾಗಿದ್ದ ಇಬ್ಬರು ಯುವಕರಲ್ಲಿ, ಸಂಘದ ಕಾರ್ಯಕರ್ತರಾದ ಪರೇಶ್ ಮೇಸ್ತ ಶವವಾಗಿ ಶೆಟ್ಟಿಕೆರೆಯಲ್ಲಿ ಪತ್ತೆಯಾಗಿದ್ದಾರೆ. ಇಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಖುದ್ದು ಹೊನ್ನಾವರಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು, ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದರು. ಇದೆ ಸಂದರ್ಭದಲ್ಲಿ ಸಚಿವರು ಮೃತರ ಕುಟುಂಬದವರೊಂದಿಗೆ ಇದ್ದು ಅವರಿಗೆ ಸಾಂತ್ವಾನ ಹೇಳಿದರು.
ರಾಜ್ಯದಲ್ಲಿ ಹಿಂದೂಗಳ ಮಾರಣಹೋಮವನ್ನು ಯೆಥೇಚ್ಛವಾಗಿ ನೆರೆವೇರಿಸುತ್ತಿರುವ ಸನ್ಮಾನ್ಯ ಸಿದ್ಧರಾಮಯ್ಯನವರ ಸರ್ಕಾರ ಈಗ್ಗೆ ಅವರ ಉಪಸ್ಥಿತಿಯಲ್ಲೇ ನೆರೆವೇರುತ್ತಿರುವುದು ಯಾವ ಹಂತಕ್ಕೆ ಬಂದು ಮುಟ್ಟಿದ್ದೇವೆ ಎಂದು ತಿಳಿಯಲು ಪ್ರಸ್ತುತ ಪರೇಶ್ ಮೇಸ್ತರ ಕೊಲೆಯೇ ಸಾಕ್ಷಿ ಎಂದು ಸಚಿವರು ನುಡಿದರು. ರಾಜ್ಯದ ಮುಖ್ಯ ಮಂತ್ರಿ ಜಿಲ್ಲೆಯ ಪ್ರವಾಸದಲ್ಲಿದ್ದಾಗಲೇ ಕೊಲೆಗಳು ನಡೆಯುತ್ತವೆ ಎಂದರೆ ರಾಜ್ಯದ ಪೊಲೀಸರ ಕರ್ತವ್ಯ ಪಾಲನೆ ಹಾಗು ಅವರ ದಕ್ಷತೆ ಹೇಗಿದೆ ಎಂದು ಜನ ಸಾಮಾನ್ಯರು ಪ್ರಶ್ನಿಸಿ ಆಡುವಂತಾಗಿದೆ. ಕಾಣೆಯಾಗಿರುವ ಇನ್ನೊಬ್ಬ ಯುವಕನ ಪತ್ತೆ ಇನ್ನು ತಿಳಿದಿಲ್ಲ. ಪರೇಶರ ದೇಹದ ಮೇಲೆ ತಲವಾರಿನಿಂದ ಕೊಚ್ಚಿದ ಗಾಯಗಳಿವೆ. ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಸಹ ಪರೇಶ್ ಹೆಣವಾಗಿ ಕೆರೆಯಲ್ಲಿ ಸಿಗುತ್ತಾರೆಂದರೆ ಅನುಮಾನ ಇನ್ನಷ್ಟು ಗಟ್ಟಿಯಾಗುತ್ತಿದೆ. ಪೊಲೀಸರ ಸಹಕಾರದಲ್ಲೇ ಪರೇಶ್ ಕೊಲೆಯಾಗಿದೆ ಎಂದು ನೇರವಾಗಿ ಜನ ನನಗೆ ದೂರು ನೀಡಿದ್ದಾರೆಂದು ಸಚಿವರು ತಿಳಿಸಿದರು.
ಅಲ್ಲದೆ ಗುರುವಾರ ರಾತ್ರಿಯಂದೇ ಹೆಚ್ಚಿನ ಪೊಲೀಸ್ ಪಡೆಯನ್ನು ಕರೆಸಿ ನಿಯೋಜಿಸಿ ಶುಕ್ರವಾರ ಬೆಳಿಗ್ಗೆಯೇ ಶೆಟ್ಟಿಕೆರೆಯಲ್ಲಿ ಪರೇಶರ ಶವ ಸಿಗುತ್ತದೆಯೆಂದರೆ ಪೊಲೀಸರ ಪಾತ್ರವೇನಿದೆ ಎಂದು ಇದರಲ್ಲೇ ತಿಳಿಯುತ್ತದೆ. ಮತ್ತು ಗುರುವಾರವೇ ಹೊನ್ನಾವರ ರೈಲ್ವೆ ನಿಲ್ದಾಣದ ಮೂಲಕ ಸುಮಾರು ೩೦೦ ಹೆಚ್ಚು ಶಾಂತಿದೂತರೆಂದು ಕೊಳ್ಳುವ ಭಯೋತ್ಪಾದಕರು ಊರು ಬಿಟ್ಟು ಪಲಾಯಾನ ಮಾಡಿ(ಸಿ)ದ್ದು ನಮ್ಮ ದಕ್ಷ ಹಾಗು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವ ಪೊಲೀಸರಿಗೆ ತಿಳಿಯಲಿಲ್ಲವೇ ಎಂದು ಸಚಿವರು ಪ್ರಶ್ನಿಸಿದರು.
ಸನ್ಮಾನ್ಯ ಸಿದ್ಧರಾಮಯ್ಯನವರು ನೇರವಾಗಿ ಪೊಲೀಸರನ್ನು ನಿರ್ಲಜ್ಜ ಪಡೆಯನ್ನಾಗಿ ಮಾಡಿಸಿ ಇಂದಿನ ಪರೇಶ್ ಮೇಸ್ಟರ ಕೊಲೆಗೆ ನೇರ ಜವಾಬ್ದಾರರಾಗಿದ್ದರೆ. ಸತ್ಯ ಹೊರ ಬರಲೇ ಬೇಕಿದೆ, ಅನ್ಯಾಯ ಸಹಿಸಲಾಗುವುದಿಲ್ಲ ಮತ್ತು ಪರೇಶರ ಕುಟುಂಬಕ್ಕೆ ಪರಿಹಾರ ನೀಡಬೇಕಾಗಿದೆ ಎಂದ ಸಚಿವರು, ಈ ಕೊಲೆಗೆ ಸಿದ್ಧರಾಮಯ್ಯನವರು ಬಾರಿ ದಂಡ ತೆರಬೇಕಾಗುತ್ತದೆ ಎಂದು ಸಹ ತಿಳಿಸಿದರು. ಹೊನ್ನಾವರವನ್ನು ಇನ್ನೊಂದು ಭಯೋತ್ಪಾದಕ ಕೇಂದ್ರವನ್ನಾಗಿಸಲು ಬಿಡುವುದಿಲ್ಲವೆಂದು ಮುಖ್ಯಮಂತ್ರಿಗಳಿಗೆ ಸಚಿವರು ನೇರವಾಗಿ ಎಚ್ಚರಿಸಿದ್ದಾರೆ. ಭಟ್ಕಳದ ಭಯೋತ್ಪಾದನೆ ಹೊನ್ನಾವರಕ್ಕೆ ವಿಸ್ತರಿಸಲು ಸಿದ್ಧರಾಮಯ್ಯನವರು ತಮ್ಮ ಸಮಾಜ ಒಡೆಯುವ ಸರ್ಜಿಕಲ್ ಪ್ಲಾನ್ ನಲ್ಲಿ ಏನಾದರೂ ಪ್ರಯತ್ನಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲದೆ, ಇದೆ ಕರಾವಳಿಯೇ ಪ್ರಕ್ಷುಬ್ಧವಾಗಲಿದೆ ಎಂದು ಸಹ ಅವರು ಎಚ್ಚರಿಸಿದ್ದಾರೆ.