Wednesday, November 27, 2024
ಸುದ್ದಿ

ಮಕ್ಕಳಿಗೆ ತಗ್ಗಲಿದೆ ಚೀಲದ ಹೊರೆ! – ಕಹಳೆ ನ್ಯೂಸ್

ಕೊನೆಗೂ ಪಾಲಕರು ಮತ್ತು ಶಾಲಾ ವಿದ್ಯಾರ್ಥಿಗಳು ಸಂಭ್ರಮಿಸುವ ಕಾಲ ಬಂದಿದೆ. ಕಳೆದ ಮೂರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಶಾಲಾ ಬ್ಯಾಗ್ ಹೊರೆ ಇಳಿಸುವ ವರದಿಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ತೂಕವನ್ನು ತರಗತಿಯ ಆಧಾರದ ಮೇಲೆ ನಿಗದಿ ಮಾಡಿದೆ. ವಿದ್ಯಾರ್ಥಿಯ ಬ್ಯಾಗ್ ದೇಹದ ಸರಾಸರಿ ತೂಕದ ಶೇ.10 ಮೀರದಂತೆ ಎಚ್ಚರವಹಿಸಿದೆ.
ತಿಂಗಳಲ್ಲಿ ಮೂರನೇ ಶನಿವಾರ ಶಾಲೆಗಳು ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ಯಾಗ್ ತೂಕದ ಕುರಿತು ಸೂಚನೆಗಳು:
1:ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವಂತಿಲ್ಲ
2:ವೇಳಾಪಟ್ಟಿಗೆ ಅನುಗುಣವಾಗಿ ಪಠ್ಯಪುಸ್ತಕ ತರುವಂತೆ ಸೂಚನೆ ನೀಡಬೇಕು
3:ಹುಗುರವಾದ ಬ್ಯಾಗ್ ಮತ್ತು ಇತರ ಸಾಮಗ್ರಿಗಳನ್ನು ಹೆಚ್ಚಾಗಿ ಬಳಸುವಂತೆ ಸೂಚನೆ
4:ಪುಸ್ತಕ ಇಟ್ಟುಕೊಳ್ಳಲು ಶಾಲೆಯಲ್ಲಿ ಅವಕಾಶ ಕಲ್ಪಿಸುವುದು.