Monday, January 20, 2025
ಸುದ್ದಿ

125 ದಿನಗಳಲ್ಲಿ ಪ್ರಧಾನಿ ಮೋದಿಯಿಂದ 200 ಕಾರ್ಯಕ್ರಮಗಳು..! – ಕಹಳೆ ನ್ಯೂಸ್

ದೆಹಲಿ: ಪ್ರಧಾನಿ ಮೋದಿಯ ವಿದೇಶ ಪ್ರವಾಸಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುತ್ತದೆ. ಇದ್ರ ಮಧ್ಯೆ ಮೋದಿಯ ಸ್ವದೇಶ ಪ್ರವಾಸಗಳು, ಸುತ್ತಾಟ ಕೂಡ ಭಾರೀ ಕುತೂಹಲ ಮೂಡಿಸಿದೆ. ಈ ವಯಸ್ಸಿನಲ್ಲೂ ನಮೋ ಉತ್ಸಾಹಕ್ಕೆ ಪ್ರಶಂಸೆಗಳ ಸುರಿಮಳೆ ಬರ್ತಿದೆ. ಕಳೆದ 125 ದಿನಗಳಲ್ಲಿ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಬರೋಬ್ಬರಿ 27 ರಾಜ್ಯಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಅಲ್ಲದೇ, ಈ 125 ದಿನಗಳಲ್ಲಿ ಮೋದಿ ಭಾಗಿಯಾದ ಕಾರ್ಯಕ್ರಮಗಳ ಸಂಖ್ಯೆ ಬರೋಬ್ಬರಿ 200.

ಈ ಬಗ್ಗೆ ನರೇಂದ್ರಮೋದಿ ವೆಬ್‍ಸೈಟ್‍ನಲ್ಲಿ ಲೇಖನವೊಂದು ಪ್ರಕಟಗೊಂಡಿದೆ. ಪ್ರಧಾನಿಯ ಕಾರ್ಯಕ್ರಮಗಳು ರೋಡ್‍ಶೋ, ಸಂದರ್ಶನ, ಸಂವಾದ, ಭಾಷಣಗಳು, ಸಾರ್ವಜನಿಕ ಸಭೆಗಳು ಎಲ್ಲವೂ ಒಳಗೊಂಡಿದೆ. ಇನ್ನು, ವಿಶೇಷ ಅಂದ್ರೆ ರಾಷ್ಟ ರಾಜಧಾನಿ ದೆಹಲಿಯಲ್ಲೇ ಬರೊಬ್ಬರಿ 30 ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿ ನಡೆಸಿಕೊಟ್ಟಿದ್ದಾರೆ. ಇನ್ನು, 14 ಸಂಪುಟ ಸಭೆಗಳನ್ನು ಕೂಡ ಇದೇ ವರ್ಷದಲ್ಲಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು