Recent Posts

Sunday, January 19, 2025
ಸುದ್ದಿ

ಬೀಯರ್ಡ್‍ ವುಡ್ ಆದ ಸ್ಯಾಂಡಲ್‍ವುಡ್ – ಕಹಳೆ ನ್ಯೂಸ್

ಚಿತ್ರರಂಗದಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಹೊಸ ಹೊಸ ಟ್ರೆಂಡ್‌ಗಳು ಬದಲಾಗುತ್ತಲೇ ಇರುತ್ತದೆ. ಹಿಂದಿನ ಕಾಲದಲ್ಲಿ ಬೆಲ್‌ಬಾಟಂ ಪ್ಯಾಂಟ್, ಶರ್ಟ್ ಮೇಲ್ಗಡೆಯ ಬಟನ್ ಹಾಕದೇ ಇರೋದು ಟ್ರೆಂಡ್ ಆಗಿದ್ದರೆ. ನಂತರದ ದಿನಗಳಲ್ಲಿ ಹೀರೋಗಳು ಲಾಂಗು-ಮಚ್ಚು ಹಿಡಿಯೋದು ಟ್ರೆಂಡ್ ಆಗಿತ್ತು. ಅದಾದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಚಾಲ್ತಿಯಲ್ಲಿದ್ದ ಟ್ರೆಂಡ್ ಎಂದರೆ ಸಿಕ್ಸ್ ಪ್ಯಾಕ್. ಇವೆಲ್ಲ ಮುಗಿದು ಪ್ರಸ್ತುತ ಸ್ಯಾಂಡಲ್‌ವುಡನಲ್ಲಿರುವ ಟ್ರೆಂಡ್ ‘ಗಡ್ಡ’ ಬಿಡೋದು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಕಿಂಗ್ ಸ್ಟಾರ್ ಯಶ್ ತನ್ನ ‘ಕೆಜಿಎಫ್’ ಚಿತ್ರಕ್ಕಾಗಿ ಸಕ್ಕತ್ತಾಗಿ ಗಡ್ಡ ಬಿಟ್ಟಿದ್ದರು. ಜೊತೆಗೆ ‘ಬಿಯರ್ಡೋ’ ಎನ್ನುವ ಅಂತರಾಷ್ಟಿಯ ಕಂಪೆನಿಗೆ ರಾಯಭಾರಿಯಾಗಿ ಆಯ್ಕೆಗೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಅವರಂತೆ ಉಳಿದ ನಟರೂ ಕೂಡ ತಮ್ಮ ತಮ್ಮ ಹೊಸ ಚಿತ್ರಕ್ಕಾಗಿ ವಿಭಿನ್ನವಾಗಿ ಗಡ್ಡ ಬಿಡುತ್ತಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವನೇ ಶ್ರಿಮನ್ನಾರಾಯಣ ಚಿತ್ರಕ್ಕಾಗಿ, ನಿನ್ನೆ ತಾನೆ ಬಿಡುಗಡೆಗೊಂಡ ‘99’ ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್(ಕೃತಕ ಗಡ್ಡ), ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಪೊಗರು’ ಚಿತ್ರಕ್ಕಾಗಿ, ಪ್ರಜ್ವಲ್ ದೇವರಾಜ್ ‘ಅರ್ಜುನ್ ಗೌಡ’ಗಾಗಿ ರಮೇಶ್ ಅರವಿಂದ್ ಹೊಸ ಚಿತ್ರಕ್ಕಾಗಿ, ವಿನಯ್ ರಾಜ್‌ಕುಮಾರ್ ‘ಗ್ರಾಮಾಯಣ’ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದಾರೆ.

ಈ ಲಿಸ್ಟಿಗೆ ಹೊಸ ಸೇರ್ಪಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ತಮ್ಮ ‘ರಾಬರ್ಟ್’ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದಾರೆ ಎಂಬ ಸುದ್ದಿ ಈಗ ಹೊರಬಿದ್ದಿದೆ. ಚೌಕ ಖ್ಯಾತಿಯ ತರುಣ್ ಕಿಶೋರ್ ಸುಧೀರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.