Thursday, November 28, 2024
ಸುದ್ದಿ

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ತ್ರಿಶಾ ಸಿ. ಎ ಕೋಚಿಂಗ್ ಕ್ಲಾಸ್ ಆರಂಭ – ಕಹಳೆ ನ್ಯೂಸ್

ಪುತ್ತೂರು: ವಾಣಿಜ್ಯ ವಿಷಯದಲ್ಲಿ ವ್ಯಾಸಂಗ ಮಾಡಲಿಚ್ಛಿಸುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪುತ್ತೂರಿನ ನೆಹರುನಗರದ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ತ್ರಿಶಾ ಕೋಚಿಂಗ್ ಕ್ಲಾಸ್ ಆರಂಭಗೊಂಡಿದೆ.

ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೊರಬಿದ್ದ ತಕ್ಷಣ ನಮ್ಮ ಮಕ್ಕಳ ಮುಂದಿನ ಗುರಿಗೆ ಪೂರಕ ಶಿಕ್ಷಣ ಸಂಸ್ಥೆಗಳನ್ನು ಹುಡುಕುವ ಕೆಲಸವನ್ನು ಹೆತ್ತವರು ಆರಂಭಿಸುತ್ತಾರೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಶಿಸ್ತು, ಮಾನವೀಯ ಮೌಲ್ಯಗಳನ್ನು ಬೆಳೆಸಿ ವಿದ್ಯಾರ್ಥಿಯು ಸರ್ವಾಂಗೀಣ ಬೆಳವಣಿಗೆಯಾಗುವಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳು ಶ್ರಮಿಸುತ್ತಿದೆ. ಹಾಗಾಗಿ ನಾನಾ ಕಡೆಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆಗಮಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮೀಣ ಭಾಗದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತು ಪ್ರತಿ ವರ್ಷವೂ 100% ಫಲಿತಾಂಶ ದಾಖಲಿಸಿ ಹಲವಾರು ರ‍್ಯಾಂಕ್‌ಗಳೊಂದಿಗೆ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ನುರಿತ ಶಿಕ್ಷಕರು, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ, ವಿಶಾಲವಾದ ತರಗತಿಗಳು ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಕೂಡ ಸೂಕ್ತ ಮಾರ್ಗದರ್ಶನ ಇಲ್ಲಿ ದೊರೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತ್ರಿಶಾ ಕೋಚಿಂಗ್ ಕ್ಲಾಸ್: ಸಿ.ಎ ಸಿ.ಎಸ್ ವಿದ್ಯಾರ್ಥಿಗಳಿಗೆ ಕಳೆದ 21 ವರ್ಷಗಳಿಂದ ತರಗತಿಗಳನ್ನು ನಡೆಸುತ್ತಾ ಆಲ್ ಇಂಡಿಯಾ ರ‍್ಯಾಂಕ್‌ಗಳನ್ನು ಗಳಿಸುತ್ತಿರುವ ಸಿ. ಎ.ಗೋಪಾಲಕೃಷ್ಣ ಭಟ್ ನೇತೃತ್ವದ ತ್ರಿಶಾ ಕ್ಲಾಸಸ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಹೆಸರು ಪಡೆದಿದೆ. ದೂರದ ಮಂಗಳೂರಿಗೆ ಹೋಗಿ ಕೋಚಿಂಗ್ ಪಡೆಯುವಲ್ಲಿ ಅನೇಕ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದನ್ನು ಮನಗಂಡು ವಿವೇಕಾನಂದ ಪಿಯು ಕಾಲೇಜಿನಲ್ಲಿ ತ್ರಿಶಾ ಕ್ಲಾಸಸ್ ಮೂಲಕ ಸಿಎ ಕೋಚಿಂಗ್ ನೀಡಲು ಮುಂದಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಇಂಡಸ್ಟ್ರೀಯಲ್ ವಿಸಿಟ್, ಇ -ಲರ್ನಿಂಗ್, ಡಿಜಿಟಲ್ ಮಾಧ್ಯಮದ ಜೊತೆ ಟಾಲಿ ತರಗತಿಗಳು ನಡೆಯುತ್ತಿದ್ದು ಪಿಯುಸಿ ಪ್ರೊಫೆಷನಲ್ಸ್ ಎನ್ನುವ ಹೊಸ ಪರಿಕಲ್ಪನೆ ಆರಂಭವಾಗಿದೆ.