Monday, November 25, 2024
ಸುದ್ದಿ

ಮೋದಿ ಸರ್ಕಾರದ ಮತ್ತೊಂದು ಖಡಕ್ ನಿರ್ಧಾರ,ಕಾರು ಇದ್ದವರಿಗೆ ಗ್ಯಾಸ್ ಸಬ್ಸಿಡಿ ಬಂದ್..!

 

ಹೊಸದಿಲ್ಲಿ: ನಿಮ್ಮಲ್ಲಿ ಕಾರು ಇದೆಯೇ? ಹಾಗಿದ್ದರೆ, ಅಡುಗೆ ಅನಿಲಕ್ಕೆ ಹೆಚ್ಚಿನ ಮೊತ್ತ ಪಾವತಿಸಲು ರೆಡಿಯಾಗಿ.
ಕಾರಿಗೂ ಗ್ಯಾಸಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಸಂಬಂಧ ಇದೆ. ಕಾರು ಹೊಂದಿರುವ ಕುಟುಂಬಗಳ ಗ್ಯಾಸ್‌ ಸಬ್ಸಿಡಿ ರದ್ದು ಮಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಫ‌ಲಾನುಭವಿಗಳ ಖಾತೆಗೆ ಸಬ್ಸಿಡಿ ನೇರ ವರ್ಗಾವಣೆ ಯೋಜನೆಯಿಂದಾಗಿ ಸುಮಾರು 3.60 ಕೋಟಿ ನಕಲಿ ಸಂಪರ್ಕಗಳು ಪತ್ತೆಯಾಗಿದ್ದು, ಅವುಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಸರಕಾರಕ್ಕೆ 30 ಸಾವಿರ ಕೋಟಿ ರೂ. ಉಳಿತಾಯವಾಗಿದೆ. ಈಗ ಸರಕಾರ, ಕಾರು ಇರುವ ಕುಟುಂಬಗಳ ಅಡುಗೆ ಅನಿಲ ಸಬ್ಸಿಡಿ ರದ್ದು ಮಾಡಲು ಮುಂದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್‌ಟಿಒ ಮಾಹಿತಿ ಸಂಗ್ರಹ:
ಈಗಾಗಲೇ ಕೆಲವು ಜಿಲ್ಲೆಗಳ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗಳಿಂದ ಆಯಾ ಪ್ರದೇಶಗಳ ಕಾರುಗಳ ನೋಂದಣಿ ವಿವರಗಳನ್ನು ಸರಕಾರ ಸಂಗ್ರಹಿಸಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಭಾರೀ ಉಳಿತಾಯ ಆಗಲಿದೆ. ಸದ್ಯ ದೇಶದಲ್ಲಿ ಎರಡು, ಮೂರು ಕಾರು ಹೊಂದಿರುವವರೂ ಗ್ಯಾಸ್‌ ಸಬ್ಸಿಡಿ ಪಡೆಯುತ್ತಿದ್ದಾರೆ.
ಇಂಥವರು ಸಬ್ಸಿಡಿ ರಹಿತ ಅಡುಗೆ ಅನಿಲ ಖರೀದಿ ಸಲು ಶಕ್ತರಾಗಿರುವ ಹಿನ್ನೆಲೆಯಲ್ಲಿ ಕಾರು ಮಾಲಕರನ್ನು ಎಲ್‌ಪಿಜಿ ಸಬ್ಸಿಡಿ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು “ದಿ ಬಿಸಿನೆಸ್‌ ಸ್ಟಾ éಂಡರ್ಡ್‌’ ವರದಿ ಮಾಡಿದೆ. ಕಳೆದ ವರ್ಷವಷ್ಟೇ ಸರಕಾರ, 10 ಲಕ್ಷ ರೂ.ಗಿಂತ ಅಧಿಕ ಆದಾಯ ಹೊಂದಿರುವವರನ್ನು ಎಲ್‌ಪಿಜಿ ಸಬ್ಸಿಡಿ ವ್ಯಾಪ್ತಿಯಿಂದ ಹೊರಗಿಟ್ಟಿತ್ತು.
ದೇಶದಲ್ಲಿ 25.11 ಕೋಟಿ ಎಲ್‌ಪಿಜಿ ಗ್ರಾಹಕರಿದ್ದಾರೆ. ಈಗ ಜಾಗತಿಕ ತೈಲ ದರ ಏರಿಕೆಯಾಗುತ್ತಿರುವ ಕಾರಣ, ಎಲ್‌ಪಿಜಿ ಸಬ್ಸಿಡಿ ಮೊತ್ತ ಪ್ರಸಕ್ತ ವರ್ಷ 15 ಸಾವಿರ ಕೋಟಿ ರೂ.ಗೆ ತಲುಪುವ ಸಾಧ್ಯತೆಯಿದೆ.

Leave a Response