ಆಟೋಗಳ ಮೇಲೆ ಶಂಕರ್ ನಾಗ್, ವಿಷ್ಣುವರ್ಧನ್ ಮುಂತಾದ ನಟರ ಅಭಿಮಾನಿಗಳು ಸ್ಟಿಕರ್ ಅಂಟಿಸಿ ಅಭಿಮಾನ ಮೆರೆಯೋದನ್ನ ಕೇಳಿರ್ತಿರಾ ಹಾಗೂ ನೋಡಿರ್ತೀರ…
ವಾಹನಗಳ ಮೇಲೆ ಇಷ್ಟದ ದೇವರು ಅಥವಾ ಪ್ರೀತಿ ಪಾತ್ರರ ಹೆಸರು ಅಥವಾ ಚಿತ್ರಗಳನ್ನು ಹಾಕಿಕೊಳ್ಳುವುದು ಕಾಮನ್. ಆದ್ರೆ ಇಲ್ಲೊಬ್ಬ ಕಾರು ಮಾಲೀಕ ಮಾತ್ರ ಉಗ್ರ ಒಸಮಾ ಬಿನ್ ಲಾಡೆನ್ ಸ್ಟಿಕರ್ ಹಾಕಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.
ಹೋಂಡಾ ಅಕಾರ್ಡ್ ಕಾರಿನ ಹಿಂಭಾದಲ್ಲಿ ಉಗ್ರ ಬಿನ್ ಲಾಡೆನ್ ಸ್ಟಿಕರ್ ಹಾಕಿಕೊಂಡು ಉಗ್ರರ ಮೇಲಿನ ಒಲವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕಾಲೇಜ್ ವಿದ್ಯಾರ್ಥಿಯೊಬ್ಬನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಲ್ಲಂ ಜಿಲ್ಲೆಯ ಮುಂಡಕಲ್‌ನಲ್ಲಿರುವ ಎಂಎಸ್ಎನ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಹನೀಫ್(22) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಮಾಹಿತಿ ಮೇರೆಗೆ ಪೊಲೀಸರು ಬಿನ್ ಲಾಡೆನ್ ಸ್ಟಿಕರ್ ಇದ್ದ ಕಾರನ್ನು ಸೀಜ್ ಮಾಡಿದ್ದಾರೆ.
ಆತ ಬಳಸುತ್ತಿದ್ದ ಕಾರು ಪಶ್ಚಿಮ ಬಂಗಾಳದ ನೋಂದಣಿ ಹೊಂದಿದ್ದು, ಕಳೆದ 1 ವರ್ಷದಿಂದ ಈ ಕಾರು ಕೇರಳದಲ್ಲಿ ಅಕ್ರಮವಾಗಿ ಓಡಾಡುತ್ತಿದೆಯಂತೆ.
ಈ ಸೆಕೆಂಡ್ ಹ್ಯಾಂಡ್ ಕಾರಿಗೆ ಮಾಲೀಕನಾಗಿರುವ ಮಹಮ್ಮದ್ ಹನೀಫ್ ಎನ್‌ಒಸಿ(ನೋ ಆಬ್ಜೆಕ್ಷನ್ ಸರ್ಟಿಫಿಕೇಟ್) ಇಲ್ಲದೆ ಅಕ್ರಮವಾಗಿ ಕಾರನ್ನ ರೋಡಿಗಿಳಿಸಿದ್ದ, ಇದರ ಜೊತೆಗೆ ಉಗ್ರರಿಗೆ ಬೆಂಬಲ ನೀಡಲು ಬಿನ್ ಲಾಡೆನ್ ಸ್ಟಿಕರ್ಸ್ ಬೇರೆ ಅಂಟಿಸಿಕೊಂಡಿದ್ದ . ಆದ್ರೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸಿಕ್ಕಿಬಿದ್ದಿರುವ ಹನೀಫ್ ಇದೀಗ ಕಂಬಿ ಎಣಿಸುತ್ತಿದ್ದಾನೆ.