ಕಲಬುರ್ಗಿ: ಡಾ.ಉಮೇಶ್ ಜಾಧವ್ ಚಿಂಚೋಳಿ ಮತದಾರರ ಆಶಿರ್ವಾದವನ್ನ ಮಾರಾಟ ಮಾಡಿಕೊಂಡಿದ್ದಾರೆ. ಚಿಂಚೋಳಿಗೆ ಹೋಗಲು ನಮಗೆ ಮೊದಲು ವೀಸಾ ಪಾಸ್ ಪೋರ್ಟ್ ಬೇಕಿತ್ತು ಎಂದು ಡಾ.ಉಮೇಶ್ ಜಾಧವ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜಾಧವ್ ಅವರೇ ಮಂತ್ರಿಸ್ಥಾನ ಬೇಡ ಅಂದಿದ್ರು. ಯಾವುದಾದ್ರು ಒಳ್ಳೆಯ ಛೇರ್ಮನ್ ಸಿಕ್ಕರೆ ಸಾಕು ಅಂದಿದ್ರು. ಆದ್ರೆ ಮಂತ್ರಿ ಮಾಡಿಲ್ಲ ಅಂತಾ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದಾರೆ. ಮನೆ ಮಗ ಮನೆ ಬಿಟ್ಟು ಓಡಿ ಹೋಗಿದ್ದಾನೆ.
ಹೀಗಾಗಿ ನಾನು ಚಿಂಚೋಳಿಯ ಮಗನಾಗಿ ಕೆಲಸ ಮಾಡ್ತೇನೆ ಅಂತ ಹೇಳಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಮಾರಟವಾಗಿದ್ದೇನೆ ಅಂತ ಹೇಳಿದ್ದಕ್ಕೆ ಮಾನನಷ್ಟ ಮೊಕದ್ದಮೆ ಹಾಕಿದ್ರೆ ಹಾಕಲಿ. ನಾವೂ ಹಾಕ್ತೇವಿ, ನಮಗೂ ಕಾನೂನು ಗೊತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಕುಂದಗೋಳಕ್ಕೆ ನೀಡಿದಷ್ಟು ಪ್ರಾತಿನಿಧ್ಯ ದೋಸ್ತಿ ನಾಯಕರು ಚಿಂಚೋಳಿಗೆ ನೀಡ್ತಿಲ್ಲವೆಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚಿಂಚೋಳಿ ಬಗ್ಗೆ ಯಾವ ನಾಯಕರು ಮಲತಾಯಿ ಧೋರಣೆ ತೋರಿಸಿಲ್ಲ. ಎಲ್ಲರೂ ಬಂದು ಪ್ರಚಾರ ಮಾಡುತ್ತಾರೆ ಎಂದರು. ಮೇ 19ಕ್ಕೆ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.