ಕಾಠ್ಮಂಡು: ನೇಪಾಳದ 18 ವರ್ಷದ ಯುವತಿಯೊಬ್ಬರು ಸತತ 126 ಗಂಟೆಗಳ ಕಾಲ ಡ್ಯಾನ್ಸ್ ಮಾಡೋ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಗಿನ್ನಿಸ್ ವಲ್ರ್ಡ್ ರೆಕಾಡ್ರ್ಸ್‍ನಲ್ಲಿ ಭಾರತೀಯ ಯುವತಿಯ ಹೆಸರಿನಲ್ಲಿದ್ದ, ದೀರ್ಘಾವಧಿಯ ಡ್ಯಾನ್ಸಿಂಗ್ ಮ್ಯಾರಥಾನ್ ದಾಖಲೆಯನ್ನು ಬಂಧನಾ ನೇಪಾಳ್ ಬ್ರೇಕ್ ಮಾಡಿದ್ದಾರೆ.
ಈ ಸಾಧನೆ ಮಾಡಿದ ಬಂಧನಾಗೆ ನೇಪಾಳ ಪ್ರಧಾನಮಂತ್ರಿ ಕೆಪಿ ಶರ್ಮಾ ಓಲಿ, ಕಠ್ಮಂಡುವಿನ ತಮ್ಮ ಕಚೇರಿಯಲ್ಲಿ ಕಾರ್ಯಕ್ರಮ ಏರ್ಪಡಿಸಿ ಸನ್ಮಾನಿಸಿದ್ರು. ಇಲ್ಲಿನ ಧನಕೂಟ ನಿವಾಸಿಯಾದ ಬಂಧನಾ ತನ್ನ ಸಾಧನೆ ಬಗ್ಗೆ ಮಾತನಾಡಿ, ಕಳೆದ ಶುಕ್ರವಾರವಷ್ಟೇ ಗಿನ್ನಿಸ್ ರೆಕಾರ್ಡ್ಸ್ನವರು ನನ್ನ ದಾಖಲೆ ನಿರ್ಮಾಣದ ಬಗ್ಗೆ ದೃಢಪಡಿಸಿದ್ರು ಎಂದು ಹೇಳಿದ್ರು. 2011ರಲ್ಲಿ ಭಾರತದ ಕಾಳಮಂಡಲಂ ಹೇಮಲತಾ ಎಂಬವರು ಸತತ 123 ಗಂಟೆ 15 ನಿಮಿಷಗಳ ಕಾಲ ಡ್ಯಾನ್ಸ್ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. ಈಗ ಆ ದಾಖಲೆಯನ್ನು ಬಂಧನಾ ಮುರಿದಿದ್ದಾರೆ.