Monday, November 18, 2024
ಸುದ್ದಿ

ಉಪ್ಪಿನಂಗಡಿ ಘಟಕಕ್ಕೆ ಜಿಲ್ಲಾ ಕಮಾಡೆಂಟ್ ಭೇಟಿ ಪ್ರವಾಹ ರಕ್ಷಣಾ ತಂಡ ರಚನೆ – ಕಹಳೆ ನ್ಯೂಸ್

ಇಂದು ದಿನಾಂಕ 5-5-19ರ ಆದಿತ್ಯವಾರ ಉಪ್ಪಿನಂಗಡಿ ವಾರದ ಕವಾಯತಿಗೆ ಭೇಟಿ ನೀಡಿದ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರುರವರು ಭೇಟಿ ನೀಡಿ ಕವಾಯತು ವೀಕ್ಷಣೆ ನಡೆಸಿದರು. ನಂತರ ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿ ಇರುವ ಗೃಹರಕ್ಷಕರ ಘಟಕದ ಕಚೇರಿಯಲ್ಲಿ ಕುಂದುಕೊರತೆಗಳ ಸಭೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆಗೆ ಮಾತಾನಾಡಿದ ಕಮಾಡೆಂಟ್ ಕರ್ನಾಟಕ ಹಾಗೂ ಕೇರಳ ರಾಜ್ಯದ 2 ಹಂತಗಳಲ್ಲಿ ನಡೆದ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ ಘಟಕದ ಎಲ್ಲಾ ಗೃಹರಕ್ಷಕರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಹಾಗೂ ಇನ್ನೂ ಮುಂದೆ ಎಲ್ಲಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಗೃಹರಕ್ಷಕರನ್ನು 3 ತಿಂಗಳಿಗೊಮ್ಮೆ ಬದಲಾವಣೆ ಮಾಡಲಾಗುತ್ತದೆ ಹಾಗೂ ಘಟಕದ ಎಲ್ಲಾ ಗೃಹರಕ್ಷಕರಿಗೆ ಇದರಿಂದ ಕರ್ತವ್ಯಗಳ ಅನುಭವ ಆಗುತ್ತದೆ ಅಲ್ಲದೇ ಇತರ ಇಲಾಖೆಯ ಕೆಲಸವನ್ನು ಕಲಿಯಲು ಅವಕಾಶ ಸಿಕ್ಕಿದಂತೆ ಆಗುತ್ತದೆ ಎಂದು ಹೇಳಿದರು. ಚುನಾವಣೆಯಲ್ಲಿ ಭಾವಹಿಸಿದ ಉಪ್ಪಿನಂಗಡಿ ಘಟಕದ 2 ಗೃಹರಕ್ಷಕರನ್ನು ಅಮಾನತು ಮಾಡಲಾಗುವುದು ಎಂದು ತಿಳಿಸಿದರು. ಈ ವೇಳೆ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಶಾಲಾ SDMC ಅಧ್ಯಕ್ಷ ಮೊಯೂದ್ದಿನ್ ಕುಟ್ಟಿಯವರು ಮಾತನಾಡಿ ಗೃಹರಕ್ಷಕರು ಗೌರವ ಧನದಲ್ಲಿ ನಿಷ್ಕಾಮ ಸೇವೆ ಶ್ಲಾಘನೀಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಗೃಹರಕ್ಷಕರ ಪ್ರವಾಹರಕ್ಷಣಾ ತಂಡ ರಚನೆ:- ಮುಂಬರುವ ಮುಂಗಾರು ಮಳೆ ಸಂಧರ್ಭದಲ್ಲಿ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಉಪ್ಷಿನಂಗಡಿ ಘಟಕದಲ್ಲಿ 2018ರಲ್ಲಿ ತಂಡ ರಚಿಸಿದಂತೆ ಪ್ರಸ್ತುತ 2019ರಲ್ಲೂ ಪ್ರಭಾರ ಘಟಕಾಧಿಕಾರಿ ದಿನೇಶ್ .ಬಿ ನೃತ್ವದಲ್ಲಿ ತಂಡ ರಚಿಸಿಲಾಯಿತು. ಈ ವೇಳೆಗೆ ಘಟಕದ ಎಲ್ಲಾ ವಿಪತ್ತು ಸಾಮಾಗ್ರಿಗಳನ್ನು ಪರಿಸಿಲಿಸಲಾಯಿತು. ಇನ್ನೂ ಹೆಚ್ಚಿನ ಸಾಮಾಗ್ರಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದರು. ಹಾಗೂ ಈ ಹಿಂದೆ 2018 ಗೃಹರಕ್ಷಕರ ವಿಪತ್ತು ತಂಡದ ಬಗ್ಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಸಸಿಕಾಂತ್ ಸಿಂಥಿಲ್ ರವರು 1 ರಬ್ಬರ್ ಬೋಟ್, ಸೈರನ್, ಮೇಗಾ ಪೋನ್, ಲೈಟ್, ರೈನ್ ಕೋಟ್, ಶೋ, ಎಲ್ಲಾವನ್ನೂ ಘಟಕಕ್ಕೆ ಒದಗಿಸಿದ್ದರು ಅದಲ್ಲದೆ 2018ರ 5ಜನರ ತಂಡಕ್ಕೆ ಸರಕಾರದಿಂದ ಪುರಸ್ಕಾರ, ನಗದು ಪುರಸ್ಕಾರ ನೀಡಿ ಸರಕಾರ ಗೌರವಿಸಿತ್ತು ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಮಾದರಿ ಶಾಲೆಯ SDMC ಅಧ್ಯಕ್ಷ ಮೊಯೂದ್ದಿನ್ ಕುಟ್ಟಿ,ಘಟಕಾಧಿಕಾರಿ ರಾಮಣ್ಣ ಆಚಾರ್ಯ, ಪ್ರಭಾರ ಘಟಕಾಧಿಕಾರಿ ಹಾಗೂ ASL ದಿನೇಶ್. ಬಿ.ಪುತ್ತೂರು ಘಟಕಾಧಿಕಾರಿ ಅಭಿಮಣ್ಯು ರೈ ಉಪಸ್ಥಿತರಿದ್ದರು.