Sunday, November 24, 2024
ಸುದ್ದಿ

ಕಣ್ಣು ಮುಚ್ಚಿ ಕುಳಿತ ಪುತ್ತೂರಿನ ಸಹಾಯಕ ಕಮೀಷನರ್, ತಾಶೀಲ್ದಾರ್ | ಬಿಯರ್ ಬಾಟಲ್, ಗಬ್ಬು ವಾಸನೆಯದ್ದೇ ದರ್ಬಾರ್!

 

ಪುತ್ತೂರು : ಹತ್ತಾರು ಕೋಟಿ ರೂಪಾಯಿ ವ್ಯಯ ಮಾಡಿ ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಪುತ್ತೂರಿನ ನೂತನ ಮಿನಿ ವಿಧಾನಸೌದ ಸುತ್ತ ಮುತ್ತಲಿನ ಪರಿಸ್ಥಿತಿ ಹೇಳತೀರದು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಎರಡನೇ ಹಂತದ ಸ್ವಚ್ಛ ಪುತ್ತೂರು ಅಭಿಯಾನಕ್ಕೆ ಚಾಲನೆ ದೊರೆತ ನಂತರ ಪುತ್ತೂರು ಮಿನಿ ವಿಧಾನಸೌಧದ ಸುತ್ತಲಿನ ಪ್ರದೇಶವನ್ನು ಸ್ವಚ್ಛ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಬೆಳಕಿಗೆ ಬಂದು ಪುತ್ತೂರಿನ ಸಹಾಯಕ ಕಮೀಷನರ್ ಮತ್ತು ತಾಶೀಲ್ದಾರ್ ಕಛೇರಿಯ ಸುತ್ತಮುತ್ತಲಿನ ಪ್ರದೇಶದ ವಾತವರಣದ ನೈಜತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಶಿ ರಾಶಿ ಬಿಯರ್, ಬ್ರಾಂಡಿ ಬಾಟಲ್ ಗಳ ದರ್ಬಾರ್ :

ಇದು ಎಲ್ಲೂ ಮಧ್ಯದ ಅಂಗಡಿಯ ಹಿಂದಿನ ಫೋಟೋಗಲ್ಲ, ಪುತ್ತೂರಿನ ಉನ್ನತ ಅಧಿಕಾರಿಗಳ ಆಫೀಸಿನ ಸುತ್ತಮುತ್ತಲಿನ ಪ್ರದೇಶದ ದೃಶ್ಯಾವಳಿಗಳು, ಸಾವಿರಾರು ಕೋಟಿ ರೂಪಾಯಿ ವೆಚ್ಚದ ಕಛೇರಿಗೆ ಯಾವುದೇ ಸರಿಯಾದ ಮೆಂಟೆನೆನ್ಸ್ ಇಲ್ಲದೆ ಪಾಳು ಬಿಳ ತೊಡಗಿರುವುದು, ಕಛೇರಿಯ ಹೊರಭಾಗ, ಹಿಂಬದಿ ಬಲೆಕಸಗಳು, ಸುತ್ತಲಿನ ಪ್ರದೇಶದಲ್ಲಿ ಮಾರುತಿ ಪ್ಯಾಕೆಟ್ ಗಳು, ಅಲ್ಲೆ ಕಡತಗಳನ್ನು ಬೆಂಕಿಹಾಕಿ ಸುಟ್ಟಿರುವುದು ಒಟ್ಟಾರೆ ಹೇಳಬೇಕಾದರೆ, ನೇರವಾಗಿ ಸಹಾಯಕ ಕಮೀಷನರ್ ಮತ್ತು ತಾಶೀಲ್ದಾರ್ ಅವರ ಕಛೇರಿಯ ಪರಿಸ್ಥಿತಿಯೇ ಹೋಗಿದ್ದರೆ, ಇನ್ನು ಉಳಿದ ಸರಕಾರದ ಕೆಲಸಗಳ ಪಾಡೇನು?

ಕಟಕಿಯ ಹೊರಗೆ ಡೈಲಿ ವೀಳ್ಯದೆಲೆ ತಿಂದು ಉಗೀತಾರೆ ಸಿಬ್ಬಂದಿ!

ಹೌದು, ಬಿಯರ್ ಬಾಟಲ್ ಎಕ್ಸೆಟ್ರಾ ಎಕ್ಸೆಟ್ರಾ ಒಂದೆಡೆಯಾದರೆ, ಇದು ನಿಜಕ್ಕೂ ತಲೆತಗ್ಗಿಸಬೇಕಾದ ವಿಷಯ ಮಿನಿವಿಧಾನಸೌಧದ ಎಡಬದಿಯ ಅಂದರೆ ಗ್ರಂಥಾಲಯ ಪಕ್ಕದ ಈಡೀ ಕಟ್ಟಡಕ್ಕೆ ಕರೆಂಟ್ ಪೂರೈಸುವ ಜನರೇಟರ್ ಇಟ್ಟಿರುವ ಮೇಲ್ಭಾಗದ ಕಛೇರಿಯ ಕಿಟಕಿಯಿಂದ ಕೆಳಗೆ ಉಗುಳುವ ದೃಶ್ಯ ನಿಜಕ್ಕೂ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಹಗಲು ಕುರುಡಿಗೆ ಹಿಡಿದ ಕೈ ಕನ್ನಡಿ.


ಅವ್ಯವಸ್ಥೆಗೆ ವಿಷಾದ ಪಡುತ್ತೇನೆ, ತಾಶೀಲ್ದಾರ್ – ಸಹಾಯಕ ಕಮೀಷನರ್ ಕರ್ತವ್ಯ ಮರೆತಿದ್ದರೆ – ಜೊಹಾರಾ ನಿಸಾರ

ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸದ ನಗರಸಭಾ ಸದಸ್ಯೆ ಜೊಹರಾ ನಿಸಾರ ಆಹಮದ್ ಈ ಅವ್ಯವಸ್ಥೆಯ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಕಛೇರಿಯ ಸುತ್ತಮುತ್ತವೇ ಇಂತಹ ಪರಿಸ್ಥಿತಿ ಇರುವಾಗ ಇವರು ಜನಸಮಾನ್ಯರಿಗೆ ಏನು ಮಾರ್ಗದರ್ಶನ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇವತ್ತು ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛತೆಯ ಕಾರ್ಯ ಮಾಡಿದ್ದೇವೆ ಆದರೆ, ಇನ್ನು ಈ ಕಛೇರಿಯ ಸುತ್ತಮುತ್ತ ಸುಂದರವಾಗಿ ಸದಾ ನೋಡಿಕೊಳ್ಳುವ ಕೆಲಸ ಇಲ್ಲಿನ ಅಧಿಕಾರಿಗಳದ್ದು ಎಂದು ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

Leave a Response