Monday, November 18, 2024
ಸುದ್ದಿ

ತ್ರಿಷಾ ಕೃಷ್ಣನ್ ಹುಟ್ಟು ಹಬ್ಬಕ್ಕೆ ಚಾರ್ಮಿ ವಿಶ್ ಮಾಡಿದ್ದು ಹೇಗೆ ಗೊತ್ತಾ..? – ಕಹಳೆ ನ್ಯೂಸ್

ಚಿತ್ರರಂಗದಲ್ಲಿ ನಟ ನಟಿಯರು ಪರಸ್ಪರ ಕ್ಲೋಸ್ ಆಗಿನೇ ಇರ್ತಾರೆ, ಒಬ್ಬರ ಹುಟ್ಟು ಹಬ್ಬಕ್ಕೆ ಇನ್ನೊಬ್ಬರು ವಿಶ್ ಮಾಡಿಕೊಂಡು ಖುಷಿ ಪಡುತ್ತಾ ಅಂತೇ ಇದೀಗ ತ್ರಿಷಾ ಕೃಷ್ಣನ್ ಅವರ 36ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಚಾರ್ಮಿ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. “ಬೇಬಿ ಐ ಲವ್ ಯೂ ಟುಡೇ, ಫರೆವರ್. ನನ್ನ ಮೊಣಕಾಲ ಮೇಲೆ ಕುಳಿತು ನಿನ್ನ ಸಮ್ಮತಿಗಾಗಿ ನಿರೀಕ್ಷಿಸುತ್ತಿದ್ದೇನೆ. ನಾವು ಮದುವೆಯಾಗೋಣವೇ?” ಎಂದು ಹ್ಯಾಪಿ ಬರ್ತ್‍ಡೇ ಎಂಬ ಹ್ಯಾಶ್ ಟ್ಯಾಗ್‍ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಜತೆಗೆ ತ್ರಿಷಾ ತನ್ನನ್ನು ಚುಂಬಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ ಚಾರ್ಮಿ. ಇದಕ್ಕೆ ಪ್ರತಿಕ್ರಿಯಿಸಿರುವ ತ್ರಿಷಾ, “ಧನ್ಯವಾದಗಳು, ನಾನು ನಿನಗೆ ಎಂದೋ ಓಕೆ ಹೇಳಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಾರ್ಮಿ ಕಳೆದ ಕೆಲವು ವರ್ಷಗಳಿಂದ ನಟನೆಯಿಂದ ದೂರ ಸರಿದಿದ್ದಾರೆ. ಆಕೆ ಕೊನೆಯ ಬಾರಿ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದು 2015ರಲ್ಲಿ ಮಂತ್ರ, ಜ್ಯೋತಿಲಕ್ಷ್ಮಿ ಸಿನಿಮಾಗಳ ಮೂಲಕ. ಆ ಬಳಿಕ ನಿರ್ಮಾಪಕಿಯಾಗಿ ಬದಲಾದರು. ರೋಗ್, ಪೈಸಾ ವಸೂಲ್, ಮೆಹಬೂಬಾ ಚಿತ್ರಗಳನ್ನು ನಿರ್ಮಿಸಿದರು. ಸದ್ಯಕ್ಕೆ ಇಸ್ಮಾರ್ಟ್ ಶಂಕರ್, ರೊಮಾಂಟಿಕ್ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.