Recent Posts

Monday, January 20, 2025
ಸುದ್ದಿ

ಫಣಿ ಎಫೆಕ್ಟ್: 3 ದಿನ ಆಂಧ್ರಪ್ರದೇಶದಲ್ಲಿ ಬಿಸಿಗಾಳಿ ಬೀಸುತ್ತೆ ಎಚ್ಚರಿಕೆ..! – ಕಹಳೆ ನ್ಯೂಸ್

ಆಂಧ್ರಪ್ರದೇಶ: ಫಣಿ ಚಂಡಮಾರುತದ ಹೊಡೆತದಿಂದ ಒಡಿಶಾ, ಪಶ್ಚಿಮ ಬಂಗಾಳ ತತ್ತರಿಸಿವೆ. ಆಂಧ್ರಪ್ರದೇಶದ ಕರಾವಳಿ ಭಾಗಕ್ಕೂ ಫಣಿ ಚಂಡಮಾರುತ ಅಪ್ಪಳಿಸಿದ್ದು ಈಗ ನಿಂತಿದೆ. ಆದ್ರೆ ಚಂಡಮಾರುತ ನಿಂತರೂ ಅದರ ಸೈಡ್ ಎಫೆಕ್ಟ್ ಮಾತ್ರ ಜೋರಾಗಿದೆ. ಇನ್ನೂ 3 ದಿನಗಳ ಕಾಲ ಆಂಧ್ರಪ್ರದೇಶದಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫಣಿ ಚಂಡಮಾರುತದ ಪರಿಣಾಮದಿಂದ ಆಂಧ್ರಪ್ರದೇಶದ ಕರಾವಳಿ ತೀರದ ಜಿಲ್ಲೆಗಳಲ್ಲಿ ತೇವಾಂಶದ ಕೊರತೆ ಉಂಟಾಗುವುದಲ್ಲದೆ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗಿದೆ.

ಹೀಗಾಗಿ ಎರಡ್ಮೂರು ದಿನಗಳ ಕಾಲ ಬಿಸಿಗಾಳಿ ಬೀಸುವ ಸಾಧ್ಯತೆಗಳಿವೆ. ಕೃಷ್ಣ, ಗುಂಟೂರು, ಪ್ರಕಾಶಂ, ನೆಲ್ಲೋರ ಹಾಗೂ ವಿಶಾಖಪಟ್ಟಣಂ ಹಾಗೂ ಕರಾವಳಿಯ ಕೆಲ ಭಾಗಗಳಲ್ಲಿ ಮತ್ತು ಕಡಪ, ಕರ್ನೂಲ್, ಚಿತ್ತೂರ್‌ನಲ್ಲಿ ಬಿಸಿಗಾಳಿ ಬೀಸುವ ಸೂಚನೆ ಇದೆ. ಇನ್ನು ಬಿಸಿಗಾಳಿ ಎಂದರೆ ಬೀಸುವ ಗಾಳಿಯಲ್ಲಿ ಉಷ್ಣಾಂಶ ಹೆಚ್ಚಿದ್ದು, ತೀವ್ರ ಸೆಖೆಯ ಅನುಭವವಾಗಲಿದೆ. ಸಾರ್ವಜನಿಕರು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯ ಅವಧಿಯೊಳಗೆ ಬಿಸಿಲಿಗೆ ಓಡಾಡದಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು