Recent Posts

Monday, January 20, 2025
ಸಿನಿಮಾಸುದ್ದಿ

ಪ್ರಶಾಂತ್ ನೀಲ್‍ಗೆ ಮದುವೆ ವಾರ್ಷಿಕೋತ್ಸವ ಸಂಭ್ರಮ..! – ಕಹಳೆ ನ್ಯೂಸ್

ಕೆಜಿಎಫ್.. ಕನ್ನಡ ಚಿತ್ರರಂಗದ ಹೆಮ್ಮೆ ಎನಿಸಿಕೊಂಡ ಸಿನಿಮಾ. ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸೋದ್ರ ಜೊತೆಗೆ ಜನಮೆಚ್ಚುಗೆ ಗಳಿಸಿತ್ತು. ನರಾಚಿಯ ಚಿನ್ನದ ಬೇಟೆಯ ಕಥೆ ಇಂಡಿಯಾ ಪೂರ್ತಿ ಸುತ್ತಿ ಬಂದಿತ್ತು. ಅಂದ್ಹಾಗೆ ಇಂಥದ್ದೊಂದು ಸೂಪರ್ ಹಿಟ್ ಸಿನಿಮಾದ ಹಿಂದೆ ಅದೊಂದು ಶಕ್ತಿಯಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಥಟ್ ಅಂತಾ ಭಾರತೀಯ ಚಿತ್ರರಂಗ ಕದ ತಟ್ಟಿದ್ದರು. ಹೀಗೂ ಸಿನಿಮಾ ಮಾಡಬಹುದು ಅಂತಾ ತೋರಿಸಿಕೊಟ್ಟಿದ್ದರು. ಅಂದ್ಹಾಗೆ ಇವತ್ತು ಪ್ರಶಾಂತ್ ನೀಲ್‍ಗೆ 8ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ.

ಮುದ್ದಾದ ಸಂಸಾರ..!
ಪ್ರಶಾಂತ್ ನೀಲ್ ಪರ್ಸನಲ್ ಲೈಫ್ ಕುರಿತು ಅದೆಷ್ಟೋ ಜನರಿಗೆ ತಿಳಿದಿಲ್ಲ. ಕೆಲಸ ವಿಚಾರದಲ್ಲಿ ಪ್ರಶಾಂತ್ ತುಂಬಾ ಕಟ್ಟುನಿಟ್ಟು. ಸಿನಿಮಾ ಬಿಟ್ಟರೇ ಮತ್ಯಾವುದೇ ಗಾಸಿಪ್, ರೂಮರ್ಸ್‍ನಲ್ಲಿ ಕಾಣಿಸಿಕೊಳ್ಳಲ್ಲ. ಸಿನಿಮಾದ ಜೊತೆಗೆ ವೈಯಕ್ತಿಕ ಜೀವನಕ್ಕೂ ತುಂಬಾನೆ ಕಾಳಜಿ ನೀಡುತ್ತಾರೆ. ಇಂದಿಗೆ ಪತ್ನಿ ನಿಖಿತಾರ ಜೊತೆ ಸಪ್ತಪದಿ ತುಳಿದು 8ನೇ ಸಂವತ್ಸರ ಕಳೆದಿದೆ. ಈ ಸಂಭ್ರಮವನ್ನು ಪ್ರಶಾಂತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಶಾಂತ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು