Recent Posts

Monday, January 20, 2025
ಸುದ್ದಿ

ಪುಷ್ಕರ್ ಅಖಾಡದಲ್ಲಿ ಬಾಕ್ಸರ್ ಆದ ರಾಯಲ್ ಸ್ಟಾರ್!!- ಕಹಳೆ ನ್ಯೂಸ್

ಪ್ರಸ್ತುತ ಕನ್ನಡ ಚಿತ್ರರಂಗದ ಯಶಸ್ವಿ ಹಾಗು ಸ್ಟಾರ್ ನಿರ್ಮಾಪಕರ ಪಟ್ಟಿಯಲ್ಲಿ ಟಾಪ್‍ನಲ್ಲಿ ಮಿಂಚುತ್ತಿರುವ ನಿರ್ಮಾಪಕ ಅಂದ್ರೆ ಅದು ಗೋದಿಬಣ್ಣ ಸಾಧಾರಣ ಮೈಕಟ್ಟು, ಅವನೇ ಶ್ರೀಮನ್ನಾರಾಯಣ, ಅವತಾರ್ ಪುರುಷ, ಭಿಮಸೇನ ನಳಮಹರಾಜ, 777 ಚಾರ್ಲಿ ನಿರ್ಮಾತೃ ಪುಷ್ಕರ್ ಮಲ್ಲಿಕಾರ್ಜುನ್. ಸಾಲು ಸಾಲು ವಿಭಿನ್ನ ಚಿತ್ರಗಳನ್ನು ನಿರ್ಮಿಸುತ್ತಿರುವ ಇವರು ಇದೀಗ ರಾಜ್ ಮೊಮ್ಮಗ ರಾಯಲ್ ಸ್ಟಾರ್ ವಿನಯ್ ರಾಜ್‍ಕುಮಾರ್ ಅವರ ಜೊತೆ ಹೊಸ ಚಿತ್ರ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೊಂದು ಕ್ರೀಡಾ ಚಿತ್ರವಾಗಿದ್ದು ವಿನಯ್ ಇಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತು ಈ ಚಿತ್ರಕ್ಕೆ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಕರಮ್ ಚಾವ್ಲ. ಕರಮ್ ಚಾವ್ಲ ಈ ಮೊದಲು ಛಾಯಾಗ್ರಾಹಕರಾಗಿ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಕೆಲಸ ಮಾಡಿದ ಅನುಭವ ಇದೆ. ವಿನಯ್ ರಾಜ್‍ಕುಮಾರ್ ಅನಂತು ವರ್ಸಸ್ ನುಸೃತ್ ಆದ ಮೇಲೆ ‘ಗ್ರಾಮಾಯಣ’ ಎಂಬ ಚಿತ್ರ ಮಾಡಿದ್ದರು. ಆದಾದ ಮೇಲೆ ಏನು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು