Recent Posts

Monday, January 20, 2025
ಸಿನಿಮಾಸುದ್ದಿ

ತ್ರಿಷಾ ಕಣ್ಣನ್‍ಗೆ ಪ್ರಪೋಸ್ ಮಾಡಿದ ಚಾರ್ಮಿ ಕೌರ್: ಕಹಳೆ ನ್ಯೂಸ್

ಪ್ರೀತಿ ಪ್ರೇಮ ಪ್ರಣಯ.. ಇದು ಯಾರ ಮೇಲೆ ಯಾರಿಗೂ ಬರುವಂತಹ ಒಂದು ಸುಂದರ ಅನುಭವ. ಅದು ಹುಡುಗ-ಹುಡುಗಿಯರ ನಡುವೆ ಇರಬಹುದು ಅಥವಾ ಹುಡುಗಿಯರಿಬ್ಬರ ನಡುವೆ, ಇಲ್ಲಾ ಹುಡುಗರಿಬ್ಬರ ಮಧ್ಯೆ ಮೂಡಬಹುದು. ನಮ್ಮ ಸಮಾಜದಲ್ಲೂ ಸಲಿಂಗ ವಿವಾಹವೂ ಈಗ ಕಾನೂನು ಬದ್ಧವಾಗಿದೆ. ಇದನ್ನೇ ಪ್ರಸ್ತಾಪಿಸಿ ಇತ್ತೀಚೆಗೆ ದಕ್ಷಿಣ ಭಾರತದ ಖ್ಯಾತ ನಟಿ ಚಾರ್ಮಿ ಕೌರ್, ಕ್ಯೂಟ್ ಬ್ಯಾಟಿ ನಟಿ ತ್ರಿಷಾ ಕಣ್ಣನ್‍ರನ್ನು ಪ್ರೊಪೊಸ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇ.4 ರಂದು ಹುಟ್ಟುಹಬ್ಬದ ಖುಷಿಯಲ್ಲಿದ್ದ ತ್ರಿಷಾಗೆ ಗೆಳೆತಿ ಚಾರ್ಮಿ ವಿಶೇಷವಾಗಿ ಶುಭಾಶಯ ತಿಳಿಸಿದ್ದರು. ಬೇಬಿ ಐ ಲವ್ ಯು ಟು ಡೇ ಆ್ಯಂಡ್ ಫಾರೆವರ್ ಎಂದು ಮಾತು ಆರಂಭಿಸಿದ ಚಾರ್ಮಿ, ನಾನು ನಿನ್ನ ಮುಂದೆ ಮಂಡಿಯೂರಿ ಪ್ರೇಮನಿವೇದಿಸಿದ್ದೇನೆ, ಅದಕ್ಕೆ ನೀನು ಒಪ್ಪಿಗೆ ನೀಡಬೇಕು. ನಾವಿಬ್ಬರು ಮದುವೆಯಾಗೋಣ. ಇದೀಗ ಸಲಿಂಗ ವಿವಾಹ ಕಾನೂನು ಬದ್ಧವಾಗಿದೆ ಎಂದು ಎಂದು ಬರೆದುಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ಉತ್ತರಿಸಿದ ತ್ರಿಷಾ ಕೃಷ್ಣನ್ ನಾನೀಗಾಗಲೇ ಮದುವೆಗೆ ಒಪ್ಪಿಗೆ ನೀಡಿರುವುದಾಗಿ ತಿಳಿಸಿದ್ದರು. ಇದನ್ನು ನೋಡಿದ ಅಭಿಮಾನಿಗಳಿಗೆ ಒಂದು ಕ್ಷಣ ಹಾರ್ಟ್ ಬ್ರೇಕಾಗಿತ್ತು. ಏಕೆಂದರೆ ವೃತ್ತಿಯ ಉತ್ತುಂಗದಲ್ಲಿರುವ ಇಬ್ಬರು ನಟಿಯರು ಮದುವೆಯಾಗುತ್ತಿರುವುದಾಗಿ ಸುದ್ದಿ ಹಬ್ಬಿತು.

ಆದರೆ ಸಿನಿರಂಗದ ಗೆಳೆತಿಯರಾದ ಚಾರ್ಮಿ ಹಾಗೂ ತ್ರಿಷಾ ಖುಷಿಯ ಸಂಭ್ರಮದಲ್ಲಿ ಪರಸ್ಪರ ತಮಾಷೆಗೆ ಕಾಲೆಳೆದುಕೊಂಡಿದ್ದಾರೆ. ಬದಲಾಗಿ ಇಬ್ಬರು ಸಲಿಂಗ ವಿವಾಹಕ್ಕೆ ರೆಡಿಯಾಗಿದ್ದಾರೆಂಬ ಸುದ್ದಿಯನ್ನು ಅಲ್ಲೆಗೆಳೆದಿದ್ದಾರೆ.
ಕನ್ನಡಿಗರಿಗೂ ಚಿರ ಪರಿಚಿತರಾಗಿರುವ ಚಾರ್ಮಿ ಕೌರ್ ‘ಲವಕುಶ’, ‘ದೇವ್ ಸನ್ ಆಫ್ ಮುದ್ದೇಗೌಡ’ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಪವರ್’ ಚಿತ್ರದಲ್ಲಿ ತ್ರಿಷಾ ಕೃಷ್ಣನ್ ನಟಿಸಿದ್ದರು. ಇತ್ತೀಚಿನ ಸೂಪರ್ ಡೂಪರ್ ಹಿಟ್ ಚಿತ್ರವೆನಿಸಿದ ತಮಿಳ್‍ನ ’96’ ಚಿತ್ರದ ಜಾನು ಪಾತ್ರದಲ್ಲಿ ತ್ರಿಷಾ ಮನಮೋಹಕವಾಗಿ ಅಭಿನಯಿಸಿ ಸಿನಿಪ್ರಿಯರ ಮನ ಗೆದ್ದಿದ್ದರು.