Recent Posts

Monday, January 20, 2025
ಸಿನಿಮಾಸುದ್ದಿ

‘ಅಕ್ಷಯ ತೃತಿಯ’ದ ದಿನ ಯಶ್-ರಾಧಿಕಾ ಮಗಳ ದರ್ಶನ..! – ಕಹಳೆ ನ್ಯೂಸ್

ಯಶ್- ರಾಧಿಕಾ ಸ್ಯಾಂಡಲ್‍ವುಡ್‍ನಲ್ಲಿ ‘ರಾಕಿಂಗ್ ಜೋಡಿ’ ಅಂತಲೇ ಫೇಮಸ್. ಇಬ್ಬರದ್ದೂ ಅಪರೂಪದ ಜೋಡಿ. ಅದೆಷ್ಟೋ ಜೋಡಿಗಳಿಗೆ ಇಬ್ಬರೂ ಮಾದರಿಯಾಗಿದ್ದಾರೆ. ದಶಕದ ಲವ್‍ಸ್ಟೋರಿ ಬಳಿಕ ಯಶ್-ರಾಧಿಕಾ ವಿವಾಹವಾಗಿದ್ದರು. ಇದೀಗ ಮುದ್ದಾದ ಮಗುವಿನ ತಂದೆ-ತಾಯಿ ಆಗಿದ್ದಾರೆ. ‘ರಾಕಿಂಗ್ ಜೋಡಿ’ಗೆ ಮಗುವಾಗಿ ಆರು ತಿಂಗಳಾಗಿದೆ. ಆದರೆ ಯಶ್ ಮಗಳು ಹೇಗಿದ್ದಾಳೆ..? ಎಂಬ ಕುತೂಹಲಕ್ಕೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಇದೀಗ ಅಕ್ಷಯ ತೃತೀಯದ ಸಂಭ್ರಮದಲ್ಲಿ ಯಶ್- ರಾಧಿಕಾ ಮಗಳ ಫೋಟೊ ರಿವೀಲ್ ಮಾಡೋಕೆ ಮುಂದಾಗಿದ್ದಾರೆ.

ಇನ್‍ಸ್ಟಾಗ್ರಾಂನಲ್ಲಿ ತಂದೆ- ಮಗಳು..!
ಮುದ್ದಿನ ಮಗಳ ಫೋಟೊನ ರಿವೀಲ್ ಮಾಡುವ ಕುರಿತು ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಅಪ್ಪ- ಮಗಳ ಸಂಬಂಧ ಬೆಲೆ ಕಟ್ಟಲಾಗದ್ದು. ನಮ್ಮ ಮುದ್ದಿನ ಮಗಳನ್ನು ನೋಡೋಕೆ.. ನೀವೆಲ್ಲರೂ ಕಾತುರದಲ್ಲೀದ್ದೀರಾ.. ನಿಮ್ಮ ಆಸೆಗೆ ನಾವು ನಿರಾಶೆ ಮಾಡುವುದಿಲ್ಲ. ಇದೇ ಮೇ 7ರ ಅಕ್ಷಯ ತೃತೀಯದಂದು ಮಗಳ ಫೋಟೊ ರಿವೀಲ್ ಮಾಡ್ತೀವಿ’ ಅಂತಾ ಬರೆದುಕೊಂಡಿದ್ದಾರೆ. ಈ ಸಂಬಂಧ ಮೊದಲೇ ಯಶ್- ರಾಧಿಕಾ ಮಾತನಾಡಿದ್ದರು. ಮಗಳನ್ನು ಪರಿಚಯಿಸಲು ವಿಭಿನ್ನ ಐಡಿಯಾವನ್ನೂ ನಡೆಸಿದ್ದು, ಯಶ್ ಪುತ್ರಿ ನೋಡೋಕೆ ಅಭಿಮಾನಿಗಳೂ ಕಾತುರದಿಂದಿದ್ದಾರೆ. ಜೊತೆಗೆ ಮಗುವಿನ ಹೆಸರಿನ ಕುರಿತು ದೊಡ್ಡ ಚರ್ಚೆಯಾಗುತ್ತಿದೆ. ಅಂದೇ ಹೆಸರನ್ನು ಸಹ ರಿವೀಲ್ ಮಾಡಲಿದ್ದಾರಾ..? ಎಂಬ ಕುತೂಹಲವೂ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು