Moscow: In this image provided by Riccardo Dalla Francesca shows smoke rises from a fire on a plane at Moscow's Sheremetyevo airport on Sunday, May 5, 2019. AP/PTI Photo(AP5_5_2019_000275B)
ಮಾಸ್ಕೊ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ವೇಳೆ ನೆಲಕ್ಕೆ ಅಪ್ಪಳಿಸಿದ ವಿಮಾನಕ್ಕೆ ಬೆಂಕಿ ಹತ್ತಿಕೊಂಡು 41 ಮಂದಿ ಮೃತಪಟ್ಟಘಟನೆ ನಡೆದಿದೆ. ಶೆರೆಮೆಟೈವೊ ವಿಮಾನ ನಿಲ್ದಾಣದಲ್ಲಿ ಈ ದುರಂತ ಉಂಟಾಗಿದೆ. ರಷ್ಯಾದ ಏರೋಫ್ಲೋಟ್ ವಿಮಾನಯಾನ ಸಂಸ್ಥೆಯ ಸುಖೋಯ್ ಸೂಪರ್‍ಜೆಟ್ ವಿಮಾನದಲ್ಲಿದ್ದ ಹಲವು ಮಂದಿ ಪ್ರಯಾಣಿಕರು ವಿಮಾನದ ತುರ್ತು ಸ್ಲೈಡ್‍ಗಳ ಮೂಲಕ ತಪ್ಪಿಸಿಕೊಂಡರು.
ವಿಮಾನ ನೆಲಕ್ಕೆ ಅಪ್ಪಳಿಸಿದ ಕೆಲವೇ ಕ್ಷಣದಲ್ಲೇ ವಿಮಾನದಲ್ಲಿ ಬೆಂಕಿ ಆವರಿಸಿತು. 73 ಪ್ರಯಾಣಿಕರು ಹಾಗೂ ಐದು ಮಂದಿ ಸಿಬ್ಬಂದಿಗಳು ವಿಮಾನದಲ್ಲಿದ್ದರು. ಈ ಪೈಕಿ 37 ಮಂದಿಯಷ್ಟೇ ಉಳಿದಿದ್ದಾರೆ ಎಂದು ರಷ್ಯಾದ ತನಿಖಾ ಸಂಸ್ಥೆಯ ವಕ್ತಾರೆ ಸ್ವೇತ್ಲಾನಾ ಪೆಟ್ರೆಂಕೊ ಹೇಳಿದ್ದಾರೆ. ಪ್ರತಿಕೂಲ ಹವಾಮಾನ ಮತ್ತು ಸಿಡಿಲಿನ ಕಾರಣದಿಂದ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ಕೆಲ ಪ್ರಯಾಣಿಕರು ಹೇಳಿದ್ದಾರೆ. “ವಿಮಾನ ಟೇಕಾಫ್ ಆದ ಬಳಿಕ ವಿಮಾನಕ್ಕೆ ಸಿಡಿಲು ಬಡಿಯಿತು” ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಹೇಳಿದ್ದಾರೆ.