Tuesday, January 21, 2025
ಸುದ್ದಿ

ವೈದ್ಯರ ನಿರ್ಲಕ್ಷ್ಯದಿಂದ ಅನಾಥವಾದ ಅಸುಗೂಸು – ಕಹಳೆ ನ್ಯೂಸ್

ರಾಮನಗರ : ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬರು ಹೆರಿಗೆ ನಂತರ ಮೃತಪಟ್ಟಿದ್ದು, ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಚನ್ನಪಟ್ಟಣದ ಬಾಲುನರ್ಸಿಂಗ್ ಹೋಮ್‍ಗೆ ಹೆರಿಗೆಗಾಗಿ ರಶ್ಮಿ(19) ಅವರನ್ನ ದಾಖಲಾಗಿತ್ತು. ತಡರಾತ್ರಿ 12 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದರು. ನಂತರ ಕೆಲ ಸಮಯದಲ್ಲೇ ರಶ್ಮಿ ಸಾವನ್ನಪ್ಪಿದ್ದು, ಆಪರೇಷನ್ ಥಿಯೇಟರ್‌ನಲ್ಲೆ ಶವ ಬಿಟ್ಟು ವೈದ್ಯರು ಪೊಲೀಸ್ ಭದ್ರತೆಯಲ್ಲಿ ಪರಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೈದ್ಯ ಡಾ.ಶೈಲಜಾ ರಶ್ಮಿಗೆ ಹೆರಿಗೆ ಮಾಡಿಸಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ರಶ್ಮಿ ಮೃತಪಟ್ಟಿದ್ದರಿಂದ ವಿಷಯ ತಿಳಿದ ರಶ್ಮಿ ಸಂಬಂಧಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿ ಭಟನೆ ನಡೆಸಿದ್ದು, ಚನ್ನಪಟ್ಟಣ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಮಳೂರುಪಟ್ಟಣದ ನಿವಾಸಿ ರಶ್ಮಿ ಯನ್ನು ಕಳೆದ ಒಂದು ವರ್ಷದ ಹಿಂದೆ ದೇವರಹೊಸಳ್ಳಿ ಗ್ರಾಮದ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು – ಮೈಸೂರು ಹೆದ್ದಾರಿ ತಡೆದಿದ್ದರಿಂದ ಟ್ರಾಫಿಕ್‍ಜಾಮ್‍ನಿಂದಾಗಿ ಈ ಮಾರ್ಗದ ವಾಹನ ಸಾವರರು ತೊಂದರೆಗೆ ಸಿಲುಕುವಂತಾಯಿತು. ಪ್ರತಿಭಟನಾ ಸ್ಥಳಕ್ಕೆ ಡಿಎಚ್‍ಒ, ಜಿಲ್ಲಾ ಪೊಲೀಸ್ ಅಧಿಕಾರಿಗಳು ಆಗಮಿಸಿ ಆಸ್ಪತ್ರೆ ವೈದ್ಯರಿಂದ ಮಾಹಿತಿ ಕಲೆ ಹಾಕಿದ್ದು, ಒಂದೆಡೆ ಮೃತರ ಸಂಬಂಧಿಕರ ಮನವೊಲಿಸುವ ಪ್ರಯತ್ನವೂ ನಡೆದಿದೆ. ಆದರೆ, ಪಟ್ಟುಬಿಡದ ಕುಟುಂಬಸ್ಥರು ಪ್ರತಿಭಟನಾ ನಿರತರಾಗಿದ್ದಾರೆ.