Saturday, November 16, 2024
ಸುದ್ದಿ

ಸಿಬಿಎಸ್‍ಇ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ: ಕಹಳೆ ನ್ಯೂಸ್

ನವದೆಹಲಿ: ಸಿಬಿಎಸ್‍ಇ ಫಲಿತಾಂಶ ಬಹಿರಂಗವಾದ ಬೆನ್ನಲ್ಲೇ ನವದೆಹಲಿಯ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಬೇಸರದ ಘಟನೆ ಕಳೆದ ಶುಕ್ರವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಹೊಸತಲೆಮಾರಿನ ಸ್ಪರ್ಧಾತ್ಮಕ ಜಗತ್ತಿನ ಸಂಕಟಕ್ಕೆ ಹಿಡಿದ ಕನ್ನಡಿಯಾಗಿದೆ. ಹಿಂದಿನ ಗುರುವಾರಷ್ಟೇ ಸಿಬಿಎಸ್‍ಈ ಫಲಿತಾಂಶ ಪ್ರಕಟವಾಗಿತ್ತು. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಸತತ ಮೂರು ಬಾರಿ 12ನೇ ತರಗತಿಯಲ್ಲಿ ಅನುತ್ತೀರ್ಣವಾದ ಹಿನ್ನೆಲೆಯಲ್ಲಿ ತನ್ನ ಜೀವವನ್ನೇ ತ್ಯಜಿಸಿದ್ದಾಳೆ.

ಫಲಿತಾಂಶವನ್ನು ನೋಡಲು ಮನೆಯಿಂದ ಹೊರ ಹೋಗಿದ್ದ ವಿದ್ಯಾರ್ಥಿನಿ, ಮನೆಗೆ ವಾಪಸಾಗಿದ್ದಾಳೆ. ನಂತರ ಪೋಷಕರ ಜತೆ ಊಟ ಮಾಡಿದ್ದಾಳೆ. ಅದಾದ ನಂತರ ತನ್ನ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನವದೆಹಲಿ ಪೂರ್ವ ವಿಭಾಗದ ಪೊಲೀಸರು ಮಾಹಿತಿ ನೀಡಿದ್ಧಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂಡಿಯನ್ ಎಕ್ಸ್ ಪ್ರೆಸ್  ಪತ್ರಿಕೆ ವರದಿ ಮಾಡಿರುವಂತೆ, ವಿದ್ಯಾರ್ಥಿನಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ತನ್ನ ತಾಯಿಗೆ ಕರೆ ಮಾಡಿದ್ದಾಳೆ. “ನಮಗೆ ನಿಜಕ್ಕೂ ಏನಾಗಿದೆ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಫಲಿತಾಂಶ ನೋಡಿದ ನಂತರ ಕರೆಮಾಡಿ, ತನ್ನ ಫಲಿತಾಂಶ ಇನ್ನೂ ಬಂದಿಲ್ಲ ಎಂದು ತಿಳಿಸಿದ್ದಳು. ಮತ್ತೆ ಫೇಲ್ ಆಗಿರಬಹುದು, ಅದನ್ನು ನಮಗೆ ಹೇಳಲು ಭಯವಾಗಿ, ಸುಳ್ಳು ಹೇಳಿರಬಹುದು ಎಂದು ನಾವೂ ಏನೂ ಕೇಳದೇ ಸುಮ್ಮನಾಗಿದ್ದೆವು. ಆದರೆ ನಿಜಕ್ಕೂ ಆಗಿದ್ದೇನು ಎಂಬ ಬಗ್ಗೆ ಈಗಲೂ ನಮಗೆ ಮಾಹಿತಿಯಿಲ್ಲ,” ಎಂಬುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ವಿದ್ಯಾರ್ಥಿನಿಯ ತಂದೆ ಹೇಳಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

2017ರಿಂದ ವಿದ್ಯಾರ್ಥಿನಿ ಸತತವಾಗಿ ಸಿಬಿಎಸ್‍ಇ 12ನೇ ತರಗತಿಯಲ್ಲಿ ಅನುತ್ತೀರ್ಣಳಾಗಿದ್ದಳು. 2018ರಲ್ಲಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಳು, ಆದರೆ ಪರೀಕ್ಷೆಯನ್ನು ಈ ಬಾರಿಯೂ ಬರೆದಿದ್ದಳು ಎನ್ನಲಾಗಿದೆ.

“ನನ್ನ ಮಗಳಿಗೆ ಆಂಗ್ಲ ಭಾಷೆ ಬಹಳ ಕಷ್ಟವಾಗುತ್ತಿತ್ತು. ಅದಕ್ಕಾಗಿ ಇಂಗ್ಲಿಷ್ ಟ್ಯೂಷನ್ ತರಗತಿಗೂ ಸೇರಿಸಿದ್ದೆವು,” ಎಂದು ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಗೆ ವಿದ್ಯಾರ್ಥಿನಿಯ ತಂದೆ ಹೇಳಿಕೆ ನೀಡಿದ್ದಾರೆ.