Tuesday, January 21, 2025
ಸುದ್ದಿ

ರಮ್ಯ ಟ್ವೀಟ್‍ಗೆ ನೆಟ್ಟಿಗರಿಂದ ಫುಲ್ ಕ್ಲಾಸ್ – ಕಹಳೆ ನ್ಯೂಸ್

ಬೆಂಗಳೂರು ; ಸದಾ ಒಂದಿಲ್ಲೊಂದು ವಿಚಾರಗಳಲ್ಲಿ ವಿವಾದವನ್ನ ಸೃಷ್ಟಿ ಮಾಡುತ್ತಿರುವ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಇತ್ತಿಚೆಗೆ ಮೋದಿಯನ್ನ ಹಿಟ್ಲರ್‌ಗೆ ಹೋಲಿಸಿ ವಿವಾದ ಹುಟ್ಟುಹಾಕಿದ್ದರು. ಇದೀಗ ಮತ್ತೆ ಮೋದಿ ಕಾಲೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿ ಅವರ ಮೇಲೆ ವಾಗ್ದಾಳಿ ಮಾಡುತ್ತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ಉಲ್ಲೇಖ ಮಾಡಿದ್ದರು. ಈ ಬಗ್ಗೆ ರಮ್ಯ ಕರುಣೆ ಎನ್ನುವುದನ್ನು ರಾಜೀವ್ ಗಾಂಧಿಯವರಿಂದ ಕಲಿಯಬೇಕು, ‘ನಾನು ಎಂಟು ವರ್ಷವಳಾಗಿದ್ದಾಗ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ, ಆಗ ರಾಜೀವ್ ಗಾಂಧಿ ನಿಧನರಾದ ಸುದ್ದಿಬಂತು. ಆಗ ಜನರು ಬಹಳಷ್ಟು ಕಣ್ಣೀರಿಟ್ಟಿದ್ದರು. ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ರಾಜೀವ್ ಗಾಂಧಿ ಸಾವಿನ ಬಗ್ಗೆ ಕಣ್ಣೀರಾಗಿದ್ದರು ಎಂದು ರಮ್ಯಾ ಸರಣಿ ಟ್ವೀಟ್ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ಕ್ಲಾಸ್ ತೆಗೆದುಕೊಂಡಿರುವ ನಾಗರಿಕರು, ಮೊದಲು ನೀವು ಮತದಾನ ಮಾಡುವುದನ್ನು ಕಲಿಯಿರಿ, ಮೋದಿ ಅವರಿಂದ ನೀವು ಕಲಿತುಕೊಳ್ಳಿ, ಯಾವ ಪಕ್ಷದವರು ಯಾವ ಹೇಳಿಕೆ ನೀಡಿದ್ದಾರೆ? ನಿಮಗೆ ಗೊತ್ತಿಲ್ಲವೇ ಎಂದು ಬಿಸಿ ಬಿಸಿ ಏಟು ನೀಡಿದ್ದಾರೆ.