Tuesday, January 21, 2025
ಸುದ್ದಿ

ಪುಲ್ವಾಮಾದಲ್ಲಿ ಮತಗಟ್ಟೆ ಮೇಲೆ ಗ್ರೆನೇಡ್ ದಾಳಿ, ಬಂಗಾಳದಲ್ಲಿ ಹಿಂಸಾಚಾರ – ಕಹಳೆ ನ್ಯೂಸ್

ಕೋಲ್ಕತ್ತ: ಇಂದು ಲೋಕಸಭಾ ಚುನಾವಣೆಗೆ ೫ನೇ ಹಂತದ ಮತದಾನ ನಡೆಯುತ್ತಿದ್ದು. ಪಶ್ಚಿಮ ಬಂಗಾಳ ಹಾಗೂ ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರದ ಬಗ್ಗೆ ವರದಿಯಾಗಿದೆ. ಬಂಗಾಳದ ಬರಾಕ್‌ಪೋರ್‌ನ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್, ತನ್ನ ಮೇಲೆ ಟಿಎಂಸಿ ಕಾರ್ಯಕರ್ತರು ಇಂದು ಬೆಳಗ್ಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮೊಹ್ರಾನ್‌ಪುರ್ ಪ್ರದೇಶದಲ್ಲಿ ಹೊರಗಡೆಯಿಂದ ಕರೆಸಿಕೊಳ್ಳಲಾದ ಟಿಎಂಸಿ ಕಾರ್ಯಕರ್ತರು ನನ್ನ ಮೇಲೆ ದಾಳಿ ನಡೆಸಿದ್ದಾರೆ. ಇವರು ಮತದಾರರನ್ನು ಬೆದರಿಸಿ ಕಳಿಸುತ್ತಿದ್ದಾರೆ. ನನಗೆ ಗಾಯಗಳಾಗಿವೆ ಎಂದು ಅರ್ಜುನ್ ಸಿಂಗ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಮತಗಟ್ಟೆ ಮೇಲೆ ಗ್ರೆನೇಡ್ ದಾಳಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು