Tuesday, January 21, 2025
ಸುದ್ದಿ

ಮಂಡ್ಯದಲ್ಲಿ ದೇವರು ಹೇಳ್ತಾನೆ, ಸುಮಲತಾ ಅವರೇ ಗೆಲ್ಲೋದು! ವೈರಲ್ ವಿಡಿಯೋ – ಕಹಳೆ ನ್ಯೂಸ್

ಮಂಡ್ಯ: ಇಡೀ ದೇಶದ ಗಮನ ಸೆಳೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋದು ‘ಸುಮಲತಾ’ ಎಂದು ದೇವರು ಹೇಳಿದ್ದಾನೆ! ಇಂಥದೊಂದು ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬರೋಬ್ಬರಿ ಎರಡು ಸಾವಿರಕ್ಕೂ ಹೆಚ್ಚು ಜನ ಇದನ್ನು ಶೇರ್ ಮಾಡಿದ್ದಾರೆ. 1.2 ಸಾವಿರ ಜನ ಇದನ್ನು ಲೈಕ್ ಮಾಡಿದ್ದಾರೆ.

ಮಂಡ್ಯದ ರಾಜಕೀಯ ಯಾವ ಪರಿ ರೋಚಕವಾಗಿದೆ ಎಂದರೆ ಇಲ್ಲಿನ ಮಕ್ಕಳಿಗೆ ಆಟವಾಡುವುದಕ್ಕೂ ರಾಜಕೀಯವೇ ಬೇಕು! ನಾಲ್ಕೈದು ಮಕ್ಕಳು ದೇವರು ಬಂದಂತೇ ಆಟವಾಡುತ್ತಿರುವ ಈ ವಿಡಿಯೋದಲ್ಲಿ, ಒಬ್ಬ ಹುಡುಗ ಮತ್ತೊಬ್ಬನನ್ನು ಕೇಳುತ್ತಾನೆ, “ನಿಖಿಲ್ ಬಂದಾನಾ, ಸುಮಲತಾ ಬಂದಾಳಾ?” ಅದಕ್ಕೆ ಮೈ ಮೇಲೆ ದೇವರು ಬಂದಂತೆ ನಟಿಸುತ್ತಿರುವ ಹುಡುಗ ರೋಷಾವೇಶದಲ್ಲಿ, ‘ಸುಮಲತಾ’ ಎನ್ನುತ್ತಾನೆ!

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿನಯ್ ಗೌಡ ಎಂಬುವವರು ಈ ವಿಡಿಯೋ ಶೇರ್ ಮಾಡಿದ್ದು, “ಅಬ್ಬಬ್ಬಬ್ಬಾ ಏನ್ ನಮ್ಮ ಮಂಡ್ಯ ಹೈಕ್ಳು ಗುರು? ಪ್ರಳಯಾಂತಕರು” ಎಂದಿದ್ದಾರೆ. ಈ ವಿಡಿಯೋಕ್ಕೆ ಹಲವರು, ‘ಸೂಪರ್’ ಎಂದು ಪ್ರತಿಕ್ರಿಯಿಸಿದ್ದರೆ, ಮತ್ತಷ್ಟು ಜನ ‘ನಟ ಸಾರ್ವಭೌಮ’ ಎಂದು ಈ ಹುಡುಗನನ್ನು ಹಾಡಿ ಹೊಗಲಿದ್ದಾರೆ. ಮಂಡ್ಯದಲ್ಲಿ ಏಪ್ರಿಲ್ 18 ರಂದು ಚುನಾವಣೆ ನಡೆದಂದಿನಿಂದಲೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆಯೇ ಎಂಬ ಬಗ್ಗೆ ವರದಿ ತಯಾರಿಸಲು ಈಗಾಗಲೇ ಹಲವು ಸಮೀಕ್ಷೆಗಳನ್ನು ನಡೆಸಲಾಗಿದೆ ಎನ್ನಲಾಗುತ್ತಿದೆ. ಇದೀಗ ಮತ್ತೊಂದು ಸಮೀಕ್ಷೆ ನಡೆಸುವಂತೆಯೂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದು ಕಾಂಗ್ರೆಸ್‌ನ ಹಲವು ನಾಯಕರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಪರೋಕ್ಷವಾಗಿ ಸುಮಲತಾ ಅವರನ್ನು ಬೆಂಬಲಿಸಿದ್ದರು. ಇತ್ತೀಚೆಗಷ್ಟೇ ಸುಮಲತಾ ಅವರು ಏರ್ಪಡಿಸಿದ್ದ ಭೋಜನ ಕೂಟದಲ್ಲೂ ಕಾಂಗ್ರೆಸ್ ರೆಬೆಲ್ ನಾಯಕರು ಪಾಲ್ಗೊಳ್ಳುವ ಮೂಲಕ ಮೈತ್ರಿ ಸರ್ಕಾರಕ್ಕೆ ಇರಿಸು ಮುರಿಸುಂಟಾಗುವಂತೆ ಮಾಡಿದ್ದರು.

ಗುಪ್ತಚರ ಇಲಾಖೆ ವರದಿಯಲ್ಲಿ ಕೆಲವು ನಿಖಿಲ್ ಅವರಿಗೆ ಗೆಲುವು ಬರಬಹುದು ಎಂದಿದ್ದರೆ, ಮತ್ತೆ ಕೆಲವು ಸುಮಲತಾ ಗೆಲ್ಲುತ್ತಾರೆ ಎಂದಿವೆ. ಆದ್ದರಿಂದ ಗುಪ್ತಚರ ಇಲಾಖೆಯ ವರದಿಯನ್ನು ಆಧರಿಸಿ ನಿರ್ಧರಿಸುವುದು ಕಷ್ಟ. ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರಿಗೆ ತಾನು ಬೆಂಬಲ ನೀಡುವುದಾಗಿ ಬಿಜೆಪಿ ಹೇಳಿತ್ತು. ಅಂತೆಯೇ ತನ್ನ ಅಭ್ಯರ್ಥಿಯನ್ನೇ ಬಿಜೆಪಿ ಕಣಕ್ಕಿಳಿಸಿರಲಿಲ್ಲ. ಮೇ 23 ಫಲಿತಾಂಶ ಹೊರಬೀಳಲಿದ್ದು, ಫಲಿತಾಂಶ ಕುತೂಹಲ ಕೆರಳಿಸಿದೆ.