Sunday, January 19, 2025
ಅಂಕಣ

ಹರಕೆ’ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 36

ವರುಷ ಇಪ್ಪತ್ತಾರು ಬಡವಗೆ ಹುಡುಗಿಗಿಪ್ಪತ್ವರುಷವು|
ಹರೆಯವಾದರು ಸಾಗುತಿದ್ದವು ಹರುಷದಲಿ ಸಂಸಾರವು||
ಹರೆಯದಾಸೆಗಳೊಂದು ಇಲ್ಲದೆ ಹೊಟ್ಟೆ ಬಟ್ಟೆಗೆ ಕುನಿಸಿದೆ|
ಬಡವಬಡತಿಯರಿದ್ದರೊಲವಿಂದಣೆಯೆ ಹಕ್ಕಿಗಳಂದದೆ||೧||

ಮರುಕವೇತಕೆ ಅವಗೆ ನೆಂಟನು ಮಾಡಿದನುಚಿತವರ್ತನೆ |
ಬರಿದೆ ಮನಸನು ಕೆಡಿಸಿಕೊಳ್ಳುತ ಹೆದರಿಕೊಂಡರೆ ಚಿಂತನೆ||
ನರಿಯುವೊಳಿದೆ ಸ್ವರ್ಗಲೋಕವು ಕೋಳು ಹೋಹುದೆ ಹೇಳಿರಿ|
ದುರುಳು ದೊರೆಯವಗೆ‌‌ ಕುವರನು ತಲೆಯಬಾಗನು ತಿಳಿಯಿರಿ||೨||

ಜಾಹೀರಾತು
ಜಾಹೀರಾತು
ಜಾಹೀರಾತು

ದೂರನಿವನೂರನ್ನು ಕೂಡಲೆ ಹೋಗಿ ತೇರೆವುದೆ ಮರುಕದಿ|
ದೂರದೂರನು ಸೇರಿ ಮರ್ಯಾದೆಯಲಿ ಜೀವಿಸೆ ಜತನದಿ||
ಊರಿನರಸಂಗಾವ ಬರವಿದೆ ಯಾರನಾರದರು ಕರೆಸಲಿ|
ಭೂರಿ ಸಂತಸದಿಂದ ಹರಕೆಯ ಭೂತಕೋಲವ ನಡೆಸಲಿ||೩||

ಜಾಹೀರಾತು
ಜಾಹೀರಾತು
ಜಾಹೀರಾತು

ಎನ್ನ ಮನ ಮಿಡಿಯುತಿದೆ ಕೇಳಲು ಇತ್ತು ಇರಿಸಿದ ಪ್ರೀತಿಯ|
ಸಾಗಿ ಭಯದಲಿ ಏರಿಗಿಡ್ಡವು ಜರಿದು ಬೀಳುವ ಭೀತಿಯ||
ಬಿರಿದ ಹೂ ಬಿಳಿ ನಗುವೇಗದ ತರಳೆಯಾ ಮಲ್ಲಿಗೆಯ ಗುಣವು|
ನಂಬಿದರು ನೀಜಾಣ ಎಂದಿಗೂ ಬೂದಿ ಮುಚ್ಚಿದ ಕೆಂಡವು||೪|

ಬಂದಿಯಾಗಿಹೆನೀಗ ಕತ್ತರಿಯೊಳಗಿನಡಕೆಯ ತೆರದಲಿ|
ಭಾರಿಸಂತೋಷದಲಿ ಭಯಕೆಯ ನೇಮನಿಯಮ ನಡೆಸಲಿ||
ಮನದಿ ಯೋಚಿಸುತಿಹೆನು ಕಾಣದೆ ಹುಡುಕುತಿಹೆಯಾ ದಾರಿಯಾ|
ಎನಗೆ ತೋರುವುದೆಂದು ಪ್ರಾರ್ಥಿಸುತಿರುವೆಯಾನು ಚಾಮುಂಡಿಯಾ||೫||

Leave a Response