Monday, January 20, 2025
ಸುದ್ದಿ

ಅನುಶ್ರೀಗೆ ಸಿಕ್ಕಿತು ‘ಪ್ರಸಂಗ ಗೀತಾ’ ಬಿರುದು- ಕಹಳೆ ನ್ಯೂಸ್

ಪಟ ಪಟ ಅಂತ ಕನ್ನಡದ ಪ್ರತಿ ನುಡಿಯನ್ನು ಸ್ಪಷ್ಟವಾಗಿ ಮುತ್ತಿನಂತೆ ಉದುರಿಸಿ ಕನ್ನಡಿಗರ ಮನ ಗೆದ್ದ ನಿರೂಪಕಿ ಅಂದರೆ ಅದು ಅನುಶ್ರೀ. ನಿರೂಪಣೆಗೂ ಸೈ, ನಟನೆಗೂ ಸೈ ಎನಿಸಿಕೊಂಡಿರುವ ಈಕೆ ಅನೇಕ ಬಿರುದುಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ನಿರೂಪಣೆ ಮಾಡುತ್ತಾ ಕನ್ನಡಿಗರ ಮನೆ ಮಗಳಾಗಿರುವ ಅನುಶ್ರೀಗೆ ಇತ್ತೀಚೆಗೆ ಹೊಸದೊಂದು ಬಿರುದು ನೀಡಲಾಗಿದೆ.

ಹೌದು, ಇತ್ತೀಚೆಗೆ ಪ್ರಸಾರವಾದ ಸಂಚಿಕೆಯಲ್ಲಿ ಈ ನಟಿ ನಿರೂಪಕಿಗೆ ಹಂಸಲೇಖ ಅವರು ಪ್ರಸಂಗಗೀತ ಎಂಬ ಹೊಸ ಕನ್ನಡ ಬಿರುದನ್ನು ನೀಡಿದ್ದಾರೆ. ಇನ್ನೂ ಈ ಪದದ ಅರ್ಥವನ್ನು ಕೂಡ ಹೇಳಿದ್ದಾರೆ ಹಂಸಲೇಖ. ಪ್ರಸಂಗ ಗೀತಾ ಎಂದರೆ ಪರರ ಕತೆಗಳನ್ನು ವರ್ಣರಂಜಿತವಾಗಿ ಹೇಳುವ ವ್ಯಕ್ತಿ ಎಂದರ್ಥ. ಒಂದು ಲೆಕ್ಕದಲ್ಲಿ ಅನುಶ್ರೀ ಕೂಡ ಬೇರೆಯವರ ಕಥೆಗಳನ್ನು, ಜೀವನದ ಹಾದಿಗಳನ್ನು ಅಚ್ಚುಕಟ್ಟಾಗಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಸಂಗೀತ ಕಾರ್ಯಕ್ರಮದಲ್ಲಿಯೇ ಎಲ್ಲರ ಕತೆಯನ್ನು ಗೀತೆಯ ಮೂಲಕ ಹೇಳುವ ನಿರೂಪಕಿಯನ್ನು ಕನ್ನಡದಲ್ಲಿ ಪ್ರಸಂಗಗೀತ ಎಂದು ಕರೆಯುತ್ತಾರೆಂದು ಹಂಸಲೇಖ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು