Monday, January 20, 2025
ಸುದ್ದಿ

ಭಾರತೀಯ ನೌಕಾಪಡೆ ಮತ್ತಷ್ಟು ಬಲಿಷ್ಠ, ಸ್ಟೆಲ್ತ್ ಸಬ್‍ಮರೀನ್ ಲೋಕಾರ್ಪಣೆ – ಕಹಳೆ ನ್ಯೂಸ್

ಮುಂಬೈ: ಭಾರತೀಯ ನೌಕಾಪಡೆಯ ನಾಲ್ಕನೇ ಸ್ಕಾರ್ಪೀನ್ ಹೆಸರಿನ ಸ್ಟೆಲ್ತ್ ಸಬ್‌ಮರೀನ್ ಐಎನ್‌ಎಸ್ ವೇಲಾ ಇಂದು ಲೋಕಾರ್ಪಣೆಗೊಂಡಿದ್ದು, ಭಾರತದ ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಮುಂಬೈನ ಮಝಗಾನ್ ಡಾಕ್ ಲಿಮಿಟೆಡ್‌ನಿಂದ ಸಬ್‌ಮರೀನ್‌ಗೆ ಇಂದು ಚಾಲನೆ ನೀಡಲಾಗಿದೆ.

ಸ್ಕಾರ್ಪೀನ್ ಸಬ್‌ಮರೀನ್‌ಗಳು ನೀರಿನ ಮೇಲ್ಮೈ ಯುದ್ಧ, ಜಲಾಂತರ್ಗಾಮಿ ಯುದ್ಧ, ಗುಪ್ತಚರ ಮಾಹಿತಿ ಸಂಗ್ರಹಣೆ, ಗಣಿ, ಕಣ್ಗಾವಲು ಸೇರಿದಂತೆ ನೀರಿನೊಳಗೆ ವಿವಿಧ ಕಾರ್ಯಗಳನ್ನ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಐಎನ್‌ಎಸ್ ವೇಲಾ ೬ ಸ್ಕಾರ್ಪೀನ್ ಸಬ್‌ಮರೀನ್‌ಗಳಲ್ಲಿ ನಾಲ್ಕನೆಯದ್ದಾಗಿದೆ. ಇತರೆ ಎರಡು ಸಬ್‌ಮರೀನ್‌ಗಳಾದ ವಾಗಿರ್ ಹಾಗೂ ವಗಶೀರ್ ಈಗಾಗಲೇ ಉತ್ಪಾದನೆಯ ಅಡ್ವಾನ್ಸ್ಟ್ ಸ್ಟೇಜ್‌ನಲ್ಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

2005ರಲ್ಲಿ ಫ್ರೆಂಚ್ ಸಂಸ್ಥೆ ಡಿಸಿಎನ್‌ಎಸ್, 6 ಸಬ್‌ಮರೀನ್‌ಗಳನ್ನು ಪೂರೈಸಲು ಭಾರತೀಯ ನೌಕಾಪಡೆಯ ಪ್ರಾಜೆಕ್ಟ್-75ರಡಿ ಮಝಗಾನ್ ಡಾಕ್ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಮೊದಲನೇ ಸಬ್‌ಮರೀನ್ ಐಎನ್‌ಎಸ್ ಕಲ್ವಾರಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಯೋಜನೆಗೊಂಡಿತ್ತು. ಇನ್ನು ಐಎನ್‌ಎಸ್ ಖಾಂದೇರಿ ಹಾಗೂ ಐಎನ್‌ಎಸ್ ಕಾರಂಜ್ ಆದಷ್ಟು ಬೇಗನೆ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು