Monday, January 20, 2025
ಸುದ್ದಿ

ಬಿಎಮ್‌ಟಿಸಿ ಬಸ್‌ನಲ್ಲಿ ಹಸಿರು ಪ್ರೇಮಿಯ ಪುಟ್ಟ ಗಾರ್ಡನ್ – ಕಹಳೆ ನ್ಯೂಸ್

ಮನೆಯ ಮುಂದೆ ಬಗೆ ಬಗೆಯ ಅಚ್ಚ ಹಸಿರಿನ ಗಿಡಗಳನ್ನ ನೆಟ್ಟು ಬೆಳೆಸೋದನ್ನ ನೊಡಿದ್ದೇವೆ, ಆದ್ರೆ ಬೆಂಗಳೂರಿನ ಬಿಎಂಟಿಸಿ ಬಸ್ ಚಾಲಕರೊಬ್ಬರು ಬಸ್‌ನಲ್ಲೇ ಪ್ವಾಟ್‌ಗಳನಿಟ್ಟುಕೊಳ್ಳುವ ಮೂಲಕ ಪ್ರಯಾಣಿಕರಲ್ಲಿ ನಿತ್ಯ ಹಸಿರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಕಾವಲಬೈರಸಂದ್ರ ಹಾಗೂ ಯಶವಂತಪುರ ಮಧ್ಯೆ ಸಂಚರಿಸುವ ಬಿಎಂಟಿಸಿ ಬಸ್‌ನ ನಾರಾಯಣಪ್ಪ ಎಂಬ ಚಾಲಕರೇ ಈ ಹಸಿರುಪ್ರೇಮಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಬಸ್‌ನ ಮುಂಭಾಗ ಹಾಗೂ ಹಿಂಭಾಗ ಒಟ್ಟು 14 ಕುಂಡಗಳಲ್ಲಿ ಗಿಡಗಳನ್ನು ಇಟ್ಟುಕೊಂಡು ಅದಕ್ಕೆ ನಿತ್ಯವೂ ನೀರುಣಿಸಿ ಆರೈಕೆ ಮಾಡುತ್ತಿದ್ದಾರೆ. ಇವರ ಈ ಸಸ್ಯ ಪ್ರೇಮಕ್ಕೆ ಪ್ರಯಾಣಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೂರ್ನಾಲ್ಕು ವರ್ಷಗಳಿಂದ ಪರಿಸರ ಜಾಗೃತಿಗಾಗಿ ಈ ರೀತಿ ಬಸ್‌ನಲ್ಲಿ ಗಿಡಗಳನ್ನು ನೆಟ್ಟುಕೊಂಡು ಆರೈಕೆ ಮಾಡುತ್ತಿದ್ದೇನೆ. ಆ ಮೂಲಕ ಜನರು ಹಸಿರಿನ ಬಗ್ಗೆ ಹೆಚ್ಚು ಹೆಚ್ಚು ಆಕರ್ಷಿತರಾಗಿ ಅವುಗಳನ್ನು ಬೆಳೆಸಲಿ ಎಂಬುದು ನನ್ನ ಆಶಯ ಎಂದು ಹೇಳುತ್ತಾರೆ ನಾರಾಯಣಪ್ಪ.

ಜಾಹೀರಾತು
ಜಾಹೀರಾತು
ಜಾಹೀರಾತು