Recent Posts

Monday, January 20, 2025
ಸುದ್ದಿ

ಜೀವನಕ್ಕೆ ಬೆಳಕು ನೀಡೋ ಪುಸ್ತಕಕ್ಕೆ ಬೆಳಕು ನೀಡೋ ಸಾಧನ – ಕಹಳೆ ನ್ಯೂಸ್

ಪುಸ್ತಕ ಪ್ರಿಯರಿಗೊಂದು ಸಂತಸದ ಸುದ್ದಿ. ಪುಸ್ತಕ ಓದಲು ಇಂತಹದ್ದೇ ಸಮಯ ಅಂತೇನಿಲ್ಲ. ಬಿಡುವಿದ್ದಾಗ ಮನಸಾದಾಗ, ಇನ್ನು ಕೆಲವರು ಬೋರ್ ಆದಾಗ, ಮತ್ತೆ ಕೆಲವರು ನಿದ್ರೆ ಬರೋಲ್ಲ ಎಂದು ಪುಸ್ತಕ ಓದ್ತಾರೆ. ಆದರೆ ಹೆಚ್ಚಾಗಿ ಪುಸ್ತಕ ಪ್ರಿಯರು ರಾತ್ರಿ ವೇಳೆ ಪುಸ್ತಕ ಓದೋ ಹವ್ಯಾಸವನ್ನಿಟ್ಟುಕೊಂಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗೆ ರಾತ್ರಿ ವೇಳೆ ಪುಸ್ತಕ ಓದುವಾಗ ಕೆಲವು ತೊಂದರೆಗಳು ಇರುವುದು ಸಾಮಾನ್ಯ. ಅಂತಹ ಸಮಸ್ಯೆಗಳಿಗೆ ಶಾಶ್ವತ ಹಾಗೂ ಸಂಪೂರ್ಣ ಪರಿಹಾರ ಎಂಬಂತೆ, ‘ಬುಕ್ ರೀಡಿಂಗ್ ಲೈಟ್’ ಎಂಬ ರಾತ್ರಿ ವೇಳೆ ಪುಸ್ತಕ ಓದುವವರಿಗಾಗಿಯೇ ಸಾಧನವನ್ನು ತಯಾರಿಸಲಾಗಿದೆ. ಹಾಗೂ ಮಾರುಕಟ್ಟೆಯಲ್ಲಿ ಈ ಸಾಧನ ಲಭ್ಯವಿದೆ ಕೂಡ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಪ್ರಯೋಜನಗಳು ಯಾವುದೆಂದರೆ:
1: ಇದರಲ್ಲಿರುವ ಬ್ರೈಟ್‍ನೆಸ್ ಅನ್ನು ನಮಗೆ ಬೇಕಾದ ಹಾಗೆ ಅಡ್ಜಸ್ಟ್ ಮಾಡಿಕೊಳ್ಳಬಹುದು.
2: ನೋಡಲು ಆಕರ್ಷಕವಾಗಿರುವ ‘ಬುಕ್ ರೀಡಿಂಗ್ ಲೈಟ್’ ತುಂಬಾ ಸುಲಭವಾಗಿ ಬಳಸಬಹುದು.
3: ಈ ಮೊದಲು ಓದುವಾಗ ಕಣ್ಣಿಗೆ ಆಗುತ್ತಿದ್ದ ಆಯಾಸವನ್ನು ಇದರಿಂದ ಸಂಪೂರ್ಣವಾಗಿ ಹೋಗಲಾಡಿಸಬಹುದು.
4: ಈ ಸಾಧನವು ಭಾರವಾಗಿರದೆ ಹಗುರವಾಗಿದೆ.
5: ಬುಕ್ ರೀಡಿಂಗ್ ಲೈಟನ್ನು ರಾತ್ರಿ ವೇಳೆ ಕಾರಿನಲ್ಲಿ ಸಂಚರಿಸುವಾಗ, ಮನೆಯಲ್ಲಿ ಮತ್ತು ಮಕ್ಕಳು ಕೂಡಾ ಬಳಸಬಹುದಾಗಿದೆ.
ಬುಕ್ ರೀಡಿಂಗ್ ಲೈಟ್ ಆನ್‍ಲೈನ್‍ನಲ್ಲಿ ಲಭ್ಯವಿದೆ ಹಾಗು ಇದರ ಬೆಲೆ ಸರಾಸರಿ 200ರಿಂದ 350ರವರೆಗೆವ ಇರಲಿದೆ.