ದೆಹಲಿ : ದೇಶದಾದ್ಯಂತ ಸುಮಾರು 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಬಿಎಸ್‍ಇ ಪರೀಕ್ಷೆ ಬರೆದಿದ್ದು, ಸಿಬಿಎಸ್‍ಇ 10ನೇ ತರಗತಿಯ ಫಲಿತಾಂಶ ಇಂದು ಪ್ರಕಟಿಸಲಾಗಿದೆ. ಬುಧವಾರ ಸಿಬಿಎಸ್‍ಇ ಫಲಿತಾಂಶ ಬರಲಿದೆ ಎಂದು ಆಡಳಿತ ಮಂಡಳಿ ಘೋಷಿಸಿತ್ತಾದರೂ ಅಚ್ಚರಿ ಎಂಬಂತೆ ಇಂದು ಮಧ್ಯಾಹ್ನವೇ ಫಲಿತಾಂಶ ಪ್ರಕಟಿಸಿದೆ.
ಕಳೆದ ಫೆಬ್ರವರಿ 21ರಿಂದ ಮಾರ್ಚ್ 29ರವರೆಗೆ ಸಿಬಿಎಸ್‍ಇ ಪರೀಕ್ಷೆ ನಡೆದಿತ್ತು. ಈ ಬಾರಿಯ ಫಲಿತಾಂಶ ಕುತೂಹಲ ಕೆರಳಿಸಿದ್ದು, ಶೇ.91ರಷ್ಟು ಫಲಿತಾಂಶ ಬಂದಿದ್ದು, ತಿರುವನಂತಪುರಂ ಮೊದಲ ಸ್ಥಾನದಲ್ಲಿದ್ದು, ಶೇ.99.85ರಷ್ಟು ಫಲಿತಾಂಶ ದೊರೆತರೆ, ಚೆನ್ನೈ ಎರಡನೇ ಸ್ಥಾನದಲ್ಲಿ ಶೇ.99 ಹಾಗೂ ಅಜ್ಮೀರ್ ಮೂರನೇ ಸ್ಥಾನದಲ್ಲಿ ಶೇ.95.89 ಫಲಿತಾಂಶ ಲಭಿಸಿದೆ.
ಇನ್ನು ಇದು ಮುಂದಿನ ಭವಿಷ್ಯಕ್ಕೆ ಮಹತ್ವದ ಹೆಜ್ಜೆಯಾಗಿದೆ. ಈಗಾಗಲೇ ಆಯಾ ರಾಜ್ಯಗಳಲ್ಲಿ ರಾಜ್ಯ ಪಠ್ಯದ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿರುವುದರಿಂದ ಪದವಿ ಪೂರ್ವ ಶಿಕ್ಷಣಕ್ಕೆ ಕಾಲೇಜುಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಕೂಡ ನಡೆಯುತ್ತಿದೆ.