Recent Posts

Friday, November 15, 2024
ಸುದ್ದಿ

ಎಕ್ಸ್ ಪೈರಿ ಪಿಎಂ ಜೊತೆ ಚರ್ಚಿಸಲು ಇಷ್ಟವಿಲ್ಲ, ಹೀಗಾಗಿ ಮೋದಿ ಕರೆ ಸ್ವೀಕರಿಸಲಿಲ್ಲ-ಮಮತಾ ಬ್ಯಾನರ್ಜಿ – ಕಹಳೆ ನ್ಯೂಸ್

ಬಿಶ್ನಾಪುರ್: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ಮೋದಿ ನಡುವೆ ಮಾತಿನ ಸಮರ ಶುರುವಾಗಿದೆ. ಎಕ್ಸ್ ಪೈರಿ ಪಿಎಂ ಜೊತೆ ವೇದಿಕೆ ಹಂಚಿಕೊಳ್ಳಲು ನನಗೆ ಇಷ್ಟವಿಲ್ಲ. ಹೀಗಾಗಿ ಫಣಿ ಸೈಕ್ಲೋನ್ ಬಗ್ಗೆ ಚರ್ಚಿಸಲು ಪ್ರಧಾನಿಯ ಕರೆಗೆ ಉತ್ತರಿಸಲಿಲ್ಲ ಅಂತ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಇಂದು ಬಂಗಾಳದ ತಾಮ್ಲುಕ್‌ನಲ್ಲಿ ಮಾತನಾಡಿದ್ದ ಮೋದಿ, ಪಶ್ಚಿಮ ಬಂಗಾಳದ ಜನರ ಬಗ್ಗೆ ನನಗೆ ಚಿಂತೆ ಶುರುವಾದ್ದರಿಂದ ಫಣಿ ಸೈಕ್ಲೋನ್ ಅಪ್ಪಳಿಸೋ ಮುನ್ನ ಮಮತಾ ದೀದಿಗೆ ಕರೆ ಮಾಡಿದ್ದೆ. ಆದ್ರೆ ಅವರ ಸೊಕ್ಕು ಎಷ್ಟಿದೆ ಎಂದರೆ ನನ್ನ ಜೊತೆ ಮಾತಾಡಲು ನಿರಾಕರಿಸಿದ್ರು ಎಂದು ಹೇಳಿದ್ರು.

ಅಲ್ಲದೇ ಈ ಬಗ್ಗೆ ಟ್ವೀಟ್ ಕೂಡ ಮಾಡಿರೋ ಮೋದಿ, ಅವರು ವಾಪಸ್ ಕರೆ ಮಾಡ್ತಾರೆಂದು ನಾನು ಕಾದಿದ್ದೆ. ಆದ್ರೆ ಮಾಡಲಿಲ್ಲ. ನಾನೇ ಮತ್ತೊಮ್ಮೆ ಕರೆ ಮಾಡಿದೆ. ಬಂಗಾಳದ ಜನರ ಬಗ್ಗೆ ನನಗೆ ಚಿಂತೆಯಾಗಿತ್ತು. ಹೀಗಾಗಿ ಮಮತಾ ದೀದಿ ಜೊತೆ ಮಾತನಾಡಬೇಕಿತ್ತು. ಆದ್ರೆ ದೀದಿ ಎರಡನೇ ಬಾರಿಯೂ ನನ್ನೊಂದಿಗೆ ಮಾತನಾಡಲಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಬಿಶ್ನಾಪುರಯಲ್ಲಿ ಉತ್ತರಿಸಿದ ಮಮತಾ ಬ್ಯಾನರ್ಜಿ, ನಾನು ಖರಗ್‌ಪುರ್‌ನಲ್ಲಿ ಇದ್ದಿದ್ದರಿಂದ ಕರೆ ಸ್ವೀಕರಿಸಲು ಆಗಿರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಚುನಾವಣೆ ನಡೆಯುತ್ತಿರೋದ್ರಿಂದ ಎಕ್ಸ್ಪೈರಿ ಪ್ರಧಾನಿ ಜೊತೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ರು.ಪ್ರಧಾನಿ ಮೋದಿ ಫಣಿ ಸೈಕ್ಲೋನ್‌ಗೆ ನಡೆಸಿರುವ ಸಿದ್ಧತೆ ಬಗ್ಗೆ ಚರ್ಚಿಸಲು ತನಗೆ ಮೊದಲು ಕರೆ ಮಾಡುವ ಬದಲು ರಾಜ್ಯಪಾಲ ಕೇಶರಿನಾಥ್ ತ್ರಿಪಾಠಿಗೆ ಕರೆ ಮಾಡಿದ್ದಾರೆಂಬ ಕಾರಣಕ್ಕೆ ಮಮತಾ ಬ್ಯಾನರ್ಜಿ ಸಿಟ್ಟಾಗಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ರೆ ನಿನ್ನೆ ಪ್ರಧಾನಿ ಕಚೇರಿಯ ಅಧಿಕಾರಿಗಳು ಇದಕ್ಕೆ ಪ್ರತಿಕ್ರಿಯಿಸಿ, ಎರಡು ಬಾರಿ ಮಮತಾ ಬ್ಯಾನರ್ಜಿಯನ್ನು ಸಂಪರ್ಕಿಸಲು ಪ್ರಯತ್ನಿಸಲಾಗಿತ್ತು. ಆದ್ರೆ ಅವರು ನಮ್ಮ ಕರೆಗಳಿಗೆ ಉತ್ತರಿಸಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಕಾರಣ ನೀಡಿ, ಫಣಿ ಸೈಕ್ಲೋನ್‌ನಿಂದಾದ ಹಾನಿ ಬಗ್ಗೆ ಪರಿಶೀಲನಾ ಸಭೆ ನಡೆಸಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿದೆ ಎಂದು ಪ್ರಧಾನಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.