Recent Posts

Sunday, January 19, 2025
ಸುದ್ದಿ

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಎರಡನೇ ಹಂತದ ಸ್ವಚ್ಛ ಪುತ್ತೂರು ಅಭಿಯಾನಕ್ಕೆ ಚಾಲನೆ

 

ಪುತ್ತೂರು : ಮಂಗಳೂರಿನ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆಯುತ್ತಿರು ಸ್ವಚ್ಛ ಪುತ್ತೂರು ಎರಡನೇ ಹಂತದ ಅಭಿಯಾನಕ್ಕೆ ಚಾಲನೆ ಇಂದು ಪುತ್ತೂರಿನ ಮಿನಿವಿಧಾನಸೌಧದ ಮುಂಭಾಗದಲ್ಲಿ ದೊರಕಿತು. ಅಭಿಯಾನಕ್ಕೆ ನಿವೃತ್ತ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಪುಳು ಈಶ್ವರ ಭಟ್ , ನಗರ ಸಭಾ ಸದಸ್ಯ ರಜೇಶ್ ಬನ್ನೂರು ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ನೂರಾರು ಸಂಖ್ಯೆಯಲ್ಲಿ ನರೆದಿದ್ದ ಸ್ವಯಂ ಸೇವಕರಿಗೆ ರಾಮಕೃಷ್ಣ ಮಿಷನ್ ವತಿಯಿಂದ ಟೀಷರ್ಟ್, ಉಪಹಾರ, ತಂಪುಪಾನೀಯ ವಿತರಿಸಲಾಯಿತು. ಸ್ವಯಂ ಸೇವಕರು ಮಿನಿವಿಧಾನಸೌಧದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರ್ಯಕ್ರಮದಲ್ಲಿ ನಗರ ಸಭಾ ಸದಸ್ಯೆ ಜೊಹರಾ ನಿಸಾರ ಆಹಮ್ಮದ್, ನಗರ ಸಭಾ ಮಾಜಿ ಸದಸ್ಯರ ಶ್ರೀಮತಿ ಗೌರಿ, ಶಶಿಧರ್ ಕಜೆ, ಜಯಾನಂದ ಕೊಡಂಗೆ, ಸರೇಶ್, ಶ್ರೀಕೃಷ್ಣ ಉಪಾಧ್ಯಾಯ, ವಿನೋದ್ ಆಚಾರ್ಯ , ಶ್ಯಾಮ ಸುದರ್ಶನ ಹೊಸಮೂಲೆ, ಶಂಕರ ಮಲ್ಯ, ಚೇತನ್ ಪುತ್ತೂರು, ಮನೋಹರ್ ಕಲ್ಲಾರೆ, ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Leave a Response