Monday, April 21, 2025
ಸುದ್ದಿ

ಪಬ್‍ನಲ್ಲಿ ಸಿಬ್ಬಂದಿ ನಡುವೆ ಮಾರಾಮಾರಿ, ಪ್ರಶ್ನಿಸಿದ್ದಕ್ಕೆ ಕಸ್ಟಮರ್ ಮೇಲೂ ಹಲ್ಲೆ..! – ಕಹಳೆ ನ್ಯೂಸ್

ಬೆಂಗಳೂರು: ಕೋರಮಂಗಲದ ಪ್ರತಿಷ್ಟಿತ ಬಾರ್ಲೀಸ್ ಬ್ರೂ ಪಬ್‍ನಲ್ಲಿ ಸಿಬ್ಬಂದಿ ನಡುವೆ ನಡೆದ ಮಾರಾಮಾರಿಯಲ್ಲಿ ಕಸ್ಟಮರ್ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ತಡರಾತ್ರಿ 12 ಗಂಟೆಗೆ ಪಾರ್ಟಿ ಇದ್ದ ಕಾರಣ ದೀಪಕ್ ಹಾಗೂ ಆನಂದ್ ಎಂಬುವರು ಪಬ್‍ಗೆ ತೆರಳಿದ್ದರು. ಈ ವೇಳೆ ಪಬ್‍ನಲ್ಲಿ ಸಿಬ್ಬಂದಿ ನಡುವೆ ಜಗಳ ಶುರುವಾಗಿದೆ.

ಕೊನೆಗೆ ಜಗಳ ತಾರಕಕ್ಕೇರಿ ಪಬ್‍ನಲ್ಲಿದ್ದ ಕುರ್ಚಿಗಳನ್ನೆಲ್ಲಾ ಎಸೆದಾಡಿದ್ದಾರೆ.ಈ ವೇಳೆ ಅಲ್ಲೇ ಕುಳಿತಿದ್ದ ದೀಪಕ್ ಇದನ್ನ ಪ್ರಶ್ನಿಸಿದ್ದ್ದಾರೆ. ಇಷ್ಟಕ್ಕೇ ರೊಚ್ಚಿಗೆದ್ದ ಸಿಬ್ಬಂದಿ ತಾವು ಜಗಳವಾಡುವುದನ್ನ ನಿಲ್ಲಿಸಿ, ಕೇಳಲು ಹೋದ ದೀಪಕ್ ಹಾಗೂ ಆನಂದ್‍ಗೆ ಕಬ್ಬಿಣದ ಚೇರ್‍ನಿಂದ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಪಾರ್ಟಿಯಲ್ಲಿದ್ದ ಕೆಲ ಮಂದಿ ಮೇಲೂ ಹಲ್ಲೆ ನಡೆಸಿದ್ದಾರೆ. ಬೌನ್ಸರ್ಸ್‍ಗಳನ್ನ ಕರೆದರೂ ಪ್ರಯೋಜನವಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ, ರಕ್ತಸ್ತ್ರಾವವಾಗಿ ಆನಂದ್ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದವರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಬರುವಷ್ಟರಲ್ಲಿ ಕೆಲ ಸಿಬ್ಬಂದಿ ಎಸ್ಕೇಪ್ ಆಗಿದ್ದಾರೆ. ಸದ್ಯ ಮೂವರನ್ನ ಬಂಧಿಸಿರುವ ಕೋರಮಂಗಲ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ