ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ಸತ್ಯ ಪ್ರಮಾಣ ಮಾಡಿದ್ರೂ ಬಿಜೆಪಿ ಅಡ್ಡ ಮತದಾನ ಪರಿಹಾರ ಕಾಣದೆ ಇದೀಗ 17 ಜನ ಸಹಕಾರ ಭಾರತಿ ಸದಸ್ಯರು ರಾಜಿನಾಮೆ ನೀಡಬೇಕಾದ ಪ್ರಸಂಗ ಬಂದಿದೆ. ಕಳೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸಹಕಾರ ಬಾರತಿ ಅಭ್ಯರ್ಥಿಯಾಗಿ ವೆಂಕಟ್ ದಂಬೆಕೋಡಿ ಮತ್ತು ಕಾಂಗ್ರೆಸ್ ಬೆಂಬಲಿತ ಕೆ ಎಸ್ ದೇವರಾಜ್ ಸ್ಪರ್ಧಿಸಿದ್ದರು. ಇದ್ರಲ್ಲಿ 6 ಸಂಘ ಕಾಂಗ್ರೆಸ್ ಕೈಯಲ್ಲಿ, 17 ಸಂಘ ಬಿಜೆಪಿಯ ಸಹಕಾರಿ ಭಾರತಿ ಕೈಯಲ್ಲಿತ್ತು.
ಈ ಚುನಾವಣೆಯಲ್ಲಿ ಬಿಜೆಪಿಯ ವೆಂಕಟ್‍ಗೆ ಗೆಲುವಿಗೆ ನಿರೀಕ್ಷೆಯಿತ್ತು. ಆದ್ರೆ 13 ಮತ ಪಡೆದು ಕಾಂಗ್ರೆಸ್ ಪಕ್ಷದ ಕೆಎಸ್ ದೇವರಾಜ್ ವಿಜೇತರಾಗಿದ್ದರು, ಇದರಿಂದ ಬೇಸರಗೊಂಡ ಕಾರ್ಯಕರ್ತರು ಅಡ್ಡ ಮತದಾನ ಮಾಡಿದವರ ತಲೆದಂಡಕ್ಕೆ ಒತ್ತಾಯಿಸಿದ್ರು. ಲೋಕಸಭಾ ಚುನಾವಣಾ ನಂತರ ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು, ಬಿಜೆಪಿ ಹಾಗೂ ಆರ್‍ಎಸ್‍ಎಸ್ ಹೇಳಿತ್ತು. ಇದೀಗ 15 ಅಭ್ಯರ್ಥಿಗಳು ಕಾನತ್ತೂರು ಕ್ಷೇತ್ರದಲ್ಲಿ ಅಡ್ಡ ಮತದಾನ ಮಾಡಿಲ್ಲ ಎಂದು ಪ್ರಮಾಣ ಮಾಡಿದ್ದು ಬಿಜೆಪಿಗೆ ತಲೆನೋವಾಗಿ ಪರಿಣಮಮಿಸಿದೆ.
ನಂತರದ ಬೆಳವಣಿಗೆಯಲ್ಲಿ ಈ 17 ಮಂದಿಯಿಂದ ರಾಜಿನಾಮೆ ನೀಡುವಂತೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ. ಸಹಕಾರ ಭಾರತಿ ಪಕ್ಷದೊಳಗೆ, ಹಾಗೂ ಇತರ ಪಕ್ಷಗಳಿಂದ ಅವಮಾನಿತವಾಗಿದ್ದು, ಇದನ್ನು ಹೇಗೆ ಪರಿಹಾರ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.