Tuesday, January 21, 2025
ಸುದ್ದಿ

ರಿವಿಲ್ ಆಯ್ತು ರಾಕಿಂಗ್ ಸ್ಟಾರ್ ಮಗಳ ಫೋಟೋ – ಕಹಳೆ ನ್ಯೂಸ್

ಅನೇಕ ದಿನಗಳಿಂದ ಸ್ಯಾಂಡಲ್‍ವುಡ್ ನ ಬ್ಯುಟಿಫುಲ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕ ಪಂಡಿತ್ ಮಗಳ ಫೋಟೋ ಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯ್ತಾ ಇದ್ರು. ಅನೇಕ ಭಾರಿ ಅಭಿಮಾನಿಗಳು ಕೇಳಿದ್ದು ಇದೆ ಯಾವಾಗ ಫೋಟೋ ರಿವಿಲ್ ಮಾಡ್ತೀರಾ ಅಂತಾ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ತಮ್ಮ ಮಗಳ ಫೋಟೋವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು, ಟ್ವಿಟರ್‌ನಲ್ಲಿ ಪುತ್ರಿಯ ಫೋಟೋವನ್ನು ಟ್ವೀಟ್ ಮಾಡಿರೋ ಯಶ್, ನನ್ನ ಜಗತ್ತನ್ನು ಆಳೋ ಹುಡುಗಿ ನಿಮ್ಮ ಮುಂದೆ ಬಂದಿದ್ದಾಳೆ ಅಂತ ಬರೆದುಕೊಂಡಿದ್ದಾರೆ. ಮಗಳಿಗೆ ಇನ್ನೂ ಹೆಸರಿಡದ ಕಾರಣ ಸದ್ಯಕ್ಕೆ ವೈಆರ್ ಎಂದು ಕರೆಯೋಣ. ನಿಮ್ಮ ಪ್ರೀತಿ, ಆಶೀರ್ವಾದ ಆಕೆಗೂ ನೀಡಿ ಎಂದು ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು