Monday, January 20, 2025
ಸುದ್ದಿ

ಪಂಜ ;ಅಡಿಕೆ ಕೌಶಲ್ಯ ಸ್ವ-ಉದ್ಯೋಗ ತರಬೇತಿ ಶಿಬಿರ – ಕಹಳೆ ನ್ಯೂಸ್

ಪಂಜ, ಗುತ್ತಿಗಾರು, ಕಡಬ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗು ಜೆಸಿಐ ಪಂಜ ಪಂಚಶ್ರೀ ಮತ್ತು ಲಯನ್ಸ್ ಕ್ಲಬ್ ಪಂಜ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೇ 06 ರಿಂದ 10ರ ವರೆಗೆ ಅಡಿಕೆ ಕೌಶಲ್ಯ ಸ್ವ ಉದ್ಯೋಗ ತರಬೇತಿ ಶಿಬಿರವು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾ ಭವನದಲ್ಲಿ ನಡೆಯುತ್ತಿದೆ.

6 ರಂದು ಉದ್ಘಾಟನಾ ಕಾರ್ಯಕ್ರಮ ನಡೆದು ರಕ್ತ ವರ್ಗಿಕರಣ, ಆರೋಗ್ಯ ತಪಾಸಣೆ, ಗುರುತು ಚೀಟಿ ಫೋಟೋ, ಪರಿಚಯ 2.30ರಿಂದ ಪಂಜ ವೈದ್ಯಾಧಿಕಾರಿ ಡಾ. ಮಂಜುನಾಥ್ ಭಟ್ ಅವರಿಂದ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ, ಮೇ 07 ರಂದು ತಳೆ ಕಟ್ಟುವುದು, ಕೊಟ್ಟೆಮಣೆಗೆ ಹಗ್ಗ ಜೋಡಣೆ, ಸೇಫ್ಟಿ ಬೆಲ್ಟ್ ಉಪಯೋಗದ ಬಗ್ಗೆ ಮಾಹಿತಿ, ಮರ ಹತ್ತುವುದರ ಮೊದಲು ಗಮನಿಸ ಬೇಕಾದ ಅಂಶದ ಬಗ್ಗೆ ಮಾಹಿತಿ, ಮರ ಹತ್ತುವುದರ ಅಭ್ಯಾಸ, ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೇ 08 ರಂದು ಮರ ಹತ್ತುವ ಅಭ್ಯಾಸ ಮುಂದುವರೆಯಲಿದೆ ಇದರ ಜೊತೆಗೆ ದೋಟಿಗೆ ಹಲ್ಲು ತಯಾರಿ ಹಾಗು ಕಟ್ಟುವ ಬಗ್ಗೆ ಮಾಹಿತಿ ಹಾಗು ಪ್ರಯೋಗ ನಡೆಯಲಿದೆ ಈ ದಿನದ ಸಭೆಯಲ್ಲಿ ಕ್ರಷ್ಣ ಮೋಹನ್ ಪಿ .ಎಸ್ ಮಾನವೀಯ ಸಂಬಂಧಗಳು ಸೇವಾ ಮನೋಭಾವನೆ ಹಾಗು ಸ್ವಾಲಂಬಿಬದುಕು ಇದರ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಮೇ 09 ರಂದು 08 ರಂದು ನಡೆದ ಕಾರ್ಯಕ್ರಮ ಪುನಃ ನಡೆಯಲಿದೆ ಜೊತೆಗೆ ವಿವೇಕ್ ವಿನ್ಸನ್ ಪಾಯಸ್ ದ್ರವ್ಯಸನದಿಂದ ಮುಕ್ತ ಬದುಕು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮೇ 10 ರಂದು ಸೇಫ್ಟಿ ಬೆಲ್ಟ್ ಉಪಯೋಗಿಸಿ ಮರ ಹತ್ತುವ ಅಭ್ಯಾಸ ಮುಂದುವರೆಯಲಿದೆ ಸಿಂಪರಣೆ ಪ್ರಾತ್ಯಕ್ಷತೆ ಹಾಗು ಕೊಯ್ಲಿನ ಸಂದರ್ಭದಲ್ಲಿ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಶಿಕ್ಷಣದಿಂದ ಮಾಹಿತಿ, ಮಾಧ್ಯಮದವರೊಂದಿಗೆ ಮುಖಾಮುಖಿ ಸಂವಾದ, ಸ್ಪದ್ರ್ದೆ ಹಾಗು ಮಧ್ಯಾಹ್ನ 2, 30 ರಿಂದ ಸಮಾರೋಪ ಸಮಾರಂಭ ನಡೆಯಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷರಾದ ಸಿ. ಚಂದ್ರಶೇಖರ ಶಾಸ್ತ್ರೀ ಗಳು ಮಾಹಿತಿ ನೀಡಿದರು ಈ ಶಿಬಿರದಲ್ಲಿ 32 ಶಿಬಿರಾರ್ಥಿಗಳು ಭಾಗವಹಿಸುತ್ತಿದೆ. ಇನ್ನೂ ಮೂರೂ ದಿನಗಳ ಕಾಲ ಶಿಬಿರ ನಡೆಯಲಿದೆ ಎಲ್ಲಾ ಶಿಬಿರಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದರು.