Monday, January 20, 2025
ಕ್ರೀಡೆಸುದ್ದಿ

ಲಂಕಾದಿಂದ ಪರಿಸರ ಸ್ನೇಹಿ ಜೆರ್ಸಿ – ಕಹಳೆ ನ್ಯೂಸ್

ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ಮೂರು ವಾರ ಮಾತ್ರ ಬಾಕಿ ಇದೆ. ಎಲ್ಲಾ ತಂಡಗಳು ಈ ಪ್ರತಿಷ್ಠಿತ ಕೂಟಕ್ಕೆ ಕೊನೆಯ ಹಂತದ ತಯಾರಿಯಲ್ಲಿದೆ. ಇದರಲ್ಲಿ ನೂತನ ಜೆರ್ಸಿ ಕೂಡ ಸೇರಿದೆ.

ಆಟಗಾರರ ಜೆರ್ಸಿ ವಿಷಯದಲ್ಲಿ ಶ್ರೀಲಂಕಾ ಕ್ರಿಕೆಟ್(ಎಲ್‍ಎಲ್‍ಸಿ) ಹೊಸತನ ಮೆರೆದಿದೆ. ಎಲ್ಲಾ ತಂಡಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿದೆ. ಶ್ರೀಲಂಕಾ ಈ ಬಾರಿಯ ವಿಶ್ವಕಪ್‍ಗೆ ಪರಿಸರ ಸ್ನೇಹಿ ಜೆರ್ಸಿ ಸಿದ್ಧಪಡಿಸಿ ವಿಶ್ವಕ್ಕೆ ಉತ್ತಮ ಸಂದೇಶವನ್ನು ರವಾನಿಸಿದೆ. ತನ್ನ ಆಟಗಾರರ ಜೆರ್ಸಿಯನ್ನು ಸಮುದ್ರದಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದೆ. ಈ ಕಾರ್ಯದಿಂದ ಶ್ರೀಲಂಕಾಕ್ಕೆ ವಿಶ್ವದೆಲ್ಲೆಡೆಯಿಂದ ಶ್ಲಾಘನೆಗಳು ಕೇಳಿ ಬರುತ್ತಿದೆ. ಶ್ರೀಲಂಕಾ ತಂಡ ಜೂನ್ 1 ರಂದು ತನ್ನ ಮೊದಲ ಪಂದ್ಯವನ್ನು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು