ಭಾರತೀಯ ಸೇನಾಪಡೆಗಳನ್ನ ಆಧುನೀಕರಣಗೊಳಿಸುವತ್ತ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ, ಭಾರತೀಯ ಸೇನೆಗೆ ರಷ್ಯಾ ನಿರ್ಮಿತ ಟಿ-90 ಮಾದರಿಯ 464 ಟ್ಯಾಂಕರ್‌ಗಳ ಆಧುನೀಕರಿಸಲ್ಪಟ್ಟ ತಂತ್ರಜ್ಞಾನವನ್ನು ಖರೀದಿಸಿ, ಸ್ವದೇಶೀಯವಾಗಿ ಅವುಗಳನ್ನು ಉತ್ಪಾದಿಸಲು ನಿರ್ಧರಿಸಿದೆ.
ಒಟ್ಟು 13,448 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಹೊಸ ಟ್ಯಾಂಕರ್‌ಗಳು 2022ರಿಂದನ 2025ರೊಳಗೆ ಭಾರತಕ್ಕೆ ಲಭ್ಯವಾಗಲಿದೆ. ಭಾರತದಲ್ಲಿ ಈ ಮಾದರಿಯ ಟ್ಯಾಂಕರ್‌ಗಳಿಗೆ ‘ಭೀಷ್ಮ’ ಎಂದು ಹೆಸರಿಡಲಾಗಿದೆ.
ಎಲ್ಲ ಹೊಸ ಟ್ಯಾಂಕರ್‌ಗಳನ್ನು ಚೆನ್ನೈ ಬಳಿಯ ಅವದಿಯಲ್ಲಿರುವ ಇಂಡಿಯನ್ ಆರ್ಡನನ್ಸ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತದೆ. ರಷ್ಯಾದಿಂದ ಈಗಾಗಲೇ ಟಿ-90 ಮಾದರಿಯ 1654 ಯುದ್ಧ ಟ್ಯಾಂಕರ್‌ಗಳು ಭಾರತೀಯ ಸೇನೆಯಲಿದ್ದು, ಅದಕ್ಕೆ ಹೆಚ್ಚುವರಿಯಾಗಿ ಆಧುನೀಕೃತ ಟಿ-90 ಟ್ಯಾಂಕರ್‌ಗಳು ಸೇರ್ಪಡೆಗೊಳ್ಳಲಿದೆ.