ಲಾಹೋರ್: ಇಲ್ಲಿರುವ 11 ನೇ ಶತಮಾನದ ಸೂಫಿ ದರ್ಗಾದ ಪ್ರವೇಶ ದ್ವಾರದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿ 15 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ದಕ್ಷಿಣ ಏಷ್ಯಾದಲ್ಲೇ ದೊಡ್ಡ ದಾತಾ ದರ್ಬಾರ್ ದರ್ಗಾದ ಮಹಿಳೆಯರ ಪ್ರವೇಶ ಗೇಟ್ ಬಳಿ ಸ್ಫೋಟ ಸಂಭವಿಸಿದೆ.
ಇದೇ ದರ್ಗಾವನ್ನು ಗುರಿಯಾಗಿರಿಸಿಕೊಂಡು 2010 ರಲ್ಲಿ ದಾಳಿ ನಡೆಸಲಾಗಿತ್ತು, 40 ಮಂದಿ ಸಾವನ್ನಪ್ಪಿದ್ದರು.