ಸಿನೆಮಾ ತಾರೆಯರು ವಿವಿಧ ಸಮಾರಂಭಗಳಿಗೆ ತೆರಳುವಾಗ ತರ ತರದ ಚಿತ್ರ ವಿಚಿತ್ರ ಉಡುಗೆ-ತೊಡುಗೆಗಳನ್ನು ಧರಿಸುವದು ಸರ್ವೇಸಾಮಾನ್ಯ. ಅದರ ಜೊತೆಗೆ ಲಲನೆಯರು ತಮ್ಮ ಕೇಶ ವಿನ್ಯಾಸವನ್ನು ಕೂಡ ವಿಭಿನ್ನವಾಗಿ ಅಲಂಕರಿಸಿಕೊಂಡು ಬಂದು ಫೊಟೋಕ್ಕೆ ಫೋಸ್ ಕೊಡುತ್ತಾರೆ. ಇದೀಗ ಹೀಗೆ ಮಾಡಿಕೊಂಡು ಬಂದು ಸುದ್ದಿಯಾದವರು ಬಾಲಿವುಡ್ ಬೆಡಗಿ ಪಿಯಾಂಕ ಚೋಪ್ರಾ.
ತನಗಿಂತ ವಯಸ್ಸಿನಲ್ಲಿ ಸಣ್ಣ ಪ್ರಾಯದ ನಿಕ್ ಜೋನ್ಸ್ ಅನ್ನು ವರಿಸಿದ ಮೇಲೆ ಒಂದಿಲ್ಲಿನೊಂದು ಕಾರಣಕ್ಕೆ ಸುದ್ದಿಯಾಗುತ್ತಿರುವ ಪ್ರಿಯಾಂಕ, ಮೆಟ್ ಗಾಲ 2019 ಸಮಾರಂಭಕ್ಕೆ, ಆಫ್ರಿಕಾದ ಬುಡಕಟ್ಟು ಜನಾಂಗದ ಮಹಿಳೆಯಂತೆ ಕಾಣುವ ವಿಚಿತ್ರವಾದ ಕೇಶ ವಿನ್ಯಾಸ ಮಾಡಿಕೊಂಡು ಬಂದು ನಗೆಪಾಟಲಿಕೆಗೆ ಗುರಿಯಾಗಿದ್ದಾರೆ. ಇದನ್ನು ನೋಡಿ ಸುಮ್ಮನಿರದ ಟ್ರೋಲಿಗರು ಬೇರೆ ಬರೆ ವ್ಯಕ್ತಿಗಳ ಚಿತ್ರಕ್ಕೆ ಪ್ರಿಯಾಂಕ ಕೂದಲನ್ನು ಜೋಡಿಸಿ ಟ್ರೋಲ್ ಮಾಡುತ್ತಿದ್ದಾರೆ. ಇದರಲ್ಲಿ ವೀರಪ್ಪನ್ ಮೀಸೆ ಜೊತೆ ಪಿಯಾಂಕಾ ಹೇರ್ ಸ್ಟೈಲ್, ತಿಥಿ ಸಿನೆಮಾದ ಗಡ್ಡಪ್ಪನ ಚಿತ್ರದೊಂದಿಗಿನ ಪೋಸ್ಟರ್ ಎಡಿಟ್ ಟ್ರೋಲ್ ಸಿಕ್ಕಾಪಟ್ಟೆ ವೈರಲ್ ಆಗಿದೆ.