Recent Posts

Sunday, January 19, 2025
ಸುದ್ದಿ

ಪರೇಶ್ ಮೆಸ್ತಾ ಸಾವನ್ನು ಖಂಡಿಸಿ ಡಿ.12 ರಂದು ಬೃಹತ್ ಪ್ರತಿಭಟನೆ

 

ಬೆಂಗಳೂರು : ಹೊನ್ನಾವರದ ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿನ್ನು ಖಂಡಿಸಿ ಹಿಂದೂ ಕಾರ್ಯಕರ್ತರು ಡಿ.12 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನದ ವರೆಗೆ ಮೆರವಣಿಗೆ ಮಾಡಲು ನಿರ್ಧರಿಸಿದ್ದಾರೆ.
ಪರೇಶ್ ಮೇಸ್ತ ಸಾವಿನ ತನಿಖೆಗೆ ಆಗ್ರಹಿಸಿ ಡಿ.18ರಂದು ಹೊನ್ನಾವರದಲ್ಲಿ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ‌ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆ ಬಳಿಕ ಎಲ್ಲಾ ಪ್ರಕರಣಗಳನ್ನು ಎನ್ಐಎಗೆ ಒಪ್ಪಿಸಲು ರಾಜ್ಯಪಾಲರಿಗೆ ಮನವಿ ಮಾಡಲಾಗುತ್ತದೆ. ಲೋಕಸಭಾ ಅಧಿವೇಶನದಲ್ಲಿಯೂ ಕೂಡಾ ಪ್ರಸ್ತಾಪಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಕೇಂದ್ರ ಗೃಹ ಸಚಿವರ ಭೇಟಿ ಮಾಡಲು ಚಿಂತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response