Recent Posts

Monday, January 20, 2025
ಸುದ್ದಿ

ಸುಳ್ಯದ ತೊಡಿಕಾನದಲ್ಲಿ ಹಿಂದೂ ಧರ್ಮಜಾಗೃತಿ ಸಭೆ | ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಕಲ್ಪ

 

ಸುಳ್ಯ, ತೊಡಿಕಾನ : ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಧರ್ಮಪ್ರೇಮಿಗಳ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಉದ್ಘಾಟನೆಯನ್ನು ಬೆಳ್ತಂಗಡಿಯ ಹಿಂದುತ್ವವಾದಿಗಳಾದ ಶ್ರೀ ಜಯರಾಜ್ ಸಾಲಿಯಾನ್ ಇವರು ಮಾಡಿದರು. ಈ ವೇಳೆ ವ್ಯಾಸಪೀಠದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ವಿವೇಕ್ ಪೈ, ಸನಾತನ ಸಂಸ್ಥೆಯ ಶ್ರೀ ಆನಂದ ಗೌಡ ಉಪಸ್ಥಿತರಿದ್ದರು. ವೇದಮೂರ್ತಿಗಳಾದ ಪ್ರಕಾಶ್ ಡಿ, ಸುಬ್ರಹ್ಮಣ್ಯ ಇವರು ವೇದಮಂತ್ರ ಪಠಿಸಿದರು. ಹಿಂದೂ ಜನಜಾಗೃತಿ ಸಮಿತಿಯ ನಂದಕುಮಾರ್ ಪ್ರಭು ಶಂಖನಾದ ಮೊಳಗಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಧರ್ಮದ ಶ್ರೇಷ್ಟತೆ ಧರ್ಮಾಚರಣೆಯಲ್ಲಿ ಅಡಗಿದೆಯೆಂದು ಸನಾತನ ಸಂಸ್ಥೆಯ ವಕ್ತಾರರಾದ ಆನಂದ ಗೌಡ ಇವರು ಹೇಳಿದರು. ಅವರು ಮುಂದೆ ಮಾತನಾಡುತ್ತಾ, ’ಸುಖಸ್ಯ ಮೂಲಂ ಧರ್ಮಃ’ ಅಂದರೆ ಧರ್ಮಾಚರಣೆಯಿಂದಲೇ ಸುಖ ಸಿಗಲು ಸಾಧ್ಯವಿದೆ. ನಾವೆಲ್ಲರೂ ಸ್ವತಃ ಧರ್ಮಾಚರಣೆಯನ್ನು ಮಾಡಿ ಸಮಾಜದ ವ್ಯಕ್ತಿಗಳಿಗೆ ಧರ್ಮಚಾರಣೆಯ ಮಹತ್ವವನ್ನು ತಿಳಿಸುವುದು ಅವಶ್ಯಕತೆ ಇದೆ.
ಧರ್ಮಶಿಕ್ಷಣದಿಂದ ಧರ್ಮಾಚರಣೆ, ಧರ್ಮಾಚರಣೆಯಿಂದ ಧರ್ಮಜಾಗೃತಿ, ಧರ್ಮಜಾಗೃತಿಯಿಂದ ಧರ್ಮರಕ್ಷಣೆಯಾಗಲು ಸಾಧ್ಯವಿದೆ. ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

’ವಿಚಾರವಾದಿಗಳು ಎಂದು ಹೇಳಿಕೊಳ್ಳುವ ವಿಚಾರಶೂನ್ಯ ಹಿಂದೂ ವಿರೋಧಿಗಳಿಂದಾಗಿ ಹಿಂದೂ ಧರ್ಮದ ಅವಮಾನವಾಗುತ್ತಿದೆ. ಜವಾಹರ್‌ಲಾಲ್ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಹೇಳಿಕೆಯನ್ನು ನೀಡಿದ ಕನ್ಹಯ್ಯನನ್ನು ತನ್ನ ಸ್ವಂತ ಮಗ ಎಂಬಂತಹ ದೇಶದ್ರೋಹಿ ಹೇಳಿಕೆಗಳನ್ನು ವಿಚಾರವಾದಿಗಳು ನೀಡುತ್ತಿದ್ದಾರೆ. ನಾವು ಸಂಘಟಿತರಾಗಿ ದೇಶರಕ್ಷಣೆಯ ಕಾರ್ಯ ಮಾಡೋಣ.
ಹಿಂದೂ ರಾಷ್ಟ್ರದ ಸ್ಥಾಪನೆಯೇ ಅಂತಿಮ ಗುರಿ ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ವಿವೇಕ್ ಪೈ ಹೇಳಿದರು. ಅವರು ಮುಂದೆ ಮಾತನಾಡಿ, ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಕೇವಲ ವಾನರರ ಮಾಧ್ಯಮದಿಂದ ಧರ್ಮದ ರಕ್ಷಣೆಯನ್ನು ಮಾಡಿದರು, ದ್ವಾಪರಯುಗದಲ್ಲಿ ಭಗವಾನ್ ಶ್ರೀ ಕೃಷ್ಣನು ಪಾಂಡವರ ಮಾಧ್ಯಮದಿಂದ ಧರ್ಮಸಂಸ್ಥಾಪನೆಯನ್ನು ಮಾಡಿದನು, ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಗುರುಗಳಾದ ಸಮರ್ಥ ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಾವಳೆಯರ ಮಾಧ್ಯಮದಿಂದ ಹಿಂದವೀ ಸ್ವರಾಜ್ಯದ ಸ್ಥಾಪನೆಯನ್ನು ಮಾಡಿದರು, ಅದೇ ರೀತಿ ನಾವು ಗುರುಗಳ ಮಾರ್ಗದರ್ಶನದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು ಸಿಧ್ಧರಾಗಬೇಕಾಗಿದೆ. ಆದ್ದರಿಂದ ಅತ್ಯಂತ ಶ್ರೇಷ್ಠವಾದ ಹಿಂದೂ ಧರ್ಮದ ಮಾರ್ಗದರ್ಶನಕ್ಕನುಸಾರವಾಗಿ ಸಾಧನೆ ಮಾಡಬೇಕಿದೆ.
ಇಡೀ ವಿಶ್ವದಲ್ಲಿ ದೇವರಕೋಣೆ, ಮಾತೆ, ಪುಣ್ಯಭೂಮಿ, ವಿಶ್ವಗುರು ಎಂದು ಕರೆಸಿಕೊಳ್ಳುವಂತಹ ಅರ್ಹತೆಯಿರುವ ಶ್ರೇಷ್ಠವಾದ ದೇಶ ಅದು ಕೇವಲ ನಮ್ಮ ಭಾರತ ಮಾತ್ರ, ಆದರೆ ಹಿಂದೂ ಧರ್ಮದ ಮೇಲೆ ನಿರಂತರವಾಗಿ ಧರ್ಮದ್ರೋಹಿಗಳಿಂದ ಆಘಾತಗಳಾಗುತ್ತಿದೆ, ವಿಶ್ವದಲ್ಲಿ ಕ್ರೈಸ್ತರಿಗಾಗಿ ೧೫೨ ರಾಷ್ಟ್ರಗಳಿದೆ, ಮುಸಲ್ಮಾನರಿಗೆ ೫೨ ರಾಷ್ಟ್ರಗಳಿವೆ, ಇಷ್ಟು ಮಾತ್ರವಲ್ಲ ಬೌದ್ಧರಿಗಾಗಿ ೧೨ ರಾಷ್ಟ್ರಗಳಿವೆ, ಕೇವಲ ೬೪ ಲಕ್ಷ ಸ್ವಾಭಿಮಾನಿ ಯಹೂದಿಗಳಿಗೆ ಒಂದು ಸ್ವತಂತ್ರ ಇಸ್ರೈಲ್ ರಾಷ್ಟ್ರವಿದೆ, ಆದರೆ ನೂರು ಕೋಟಿ ಹಿಂದೂಗಳಿಗೆ ಪೃಥ್ವಿಯ ಮೇಲೆ ಒಂದೇ ಒಂದು ’ಹಿಂದೂ ರಾಷ್ಟ್ರ’ವಿಲ್ಲ.
ಸೆಕ್ಯುಲರ್ ವ್ಯವಸ್ಥೆಯಿಂದಾಗಿ ಹಿಂದೂಗಳಿಗೆ ಆಡಳಿತ ವ್ಯವಸ್ಥೆಯಲ್ಲಿ ವಂಚನೆಯಾಗುತ್ತಿದೆ. ದೇಶದ ಕಾನೂನು, ರಕ್ಷಣಾ, ಶಿಕ್ಷಣಕ್ಷೇತ್ರ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ನಾವು ಈ ಸಾಮಾಜಿಕ ದುಷ್ಟಪ್ರವೃತ್ತಿಗಳ ವಿರುದ್ಧ ಕಾನೂನು ಹೋರಾಟ ಮಾಡಬೇಕಿದೆ.
ಸಮಾಜವು ಸ್ವಾರ್ಥ ಭಾವನೆಯಿಂದ ಹೊರಬಂದು ವಿಶಾಲ ಮನೋಭಾವದಿಂದ ಶಕ್ತಿ ಮೀರಿ ಪ್ರಯತ್ನ ಮಾಡಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಭಾಗಿಯಾಗುವುದರಿಂದ ಆಧ್ಯಾತ್ಮಿಕ ಲಾಭವಾಗುವುದು. ಎಂದರು.

ಬೆಳ್ತಂಗಡಿ ತಾಲೂಕಿನ ಕಾನರ್ಪ ಚಿರಂಜೀವಿ ಯುವಕ ಮಂಡಲದ ಸಂಸ್ಥಾಪಕಾಧ್ಯಕ್ಷರಾದ ಜಯರಾಜ್ ಸಾಲಿಯಾನ್ ಮಾತನಾಡಿ, ದೇವಸ್ಥಾನಗಳನ್ನು ಸರಕಾರೀಕರಣ ಮಾಡಿ ದೇವಸ್ಥಾನದಲ್ಲಿ ಸಂಗ್ರಹವಾದ ಹಣವನ್ನು ಹಜ್ ಯಾತ್ರೆಗೆ ನೀಡಲಾಗುತ್ತದೆ. ಆದರೆ ಹಿಂದೂಗಳ ಅಮರನಾಥ ಯಾತ್ರೆಗೆ, ಶಬರಿಮಲೆ ಯಾತ್ರೆಗೆ ಯಾವುದೇ ಅನುದಾನ ನೀಡುತ್ತಿಲ್ಲ, ಬದಲಾಗಿ ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡದೇ ಬೇರೆ ಪರ್ಯಾಯವಿಲ್ಲ.
ಪ್ರೊ.ಕೆ ಎಸ್ ಭಗವಾನ್, ಇತ್ತೀಚೆಗೆ ಚಿತ್ರನಟ ಪ್ರಕಾಶ್ ರೈ ಮೊದಲಾದ ವಿಚಾರವಾದಿಗಳು ಹಿಂದೂ ಧರ್ಮದ ಕುರಿತಾಗಿ ಅವಮಾನಕಾರಿ ಹೇಳಿಕೆಯನ್ನು ನೀಡಿ ಹಿಂದೂ ಧರ್ಮಕ್ಕೆ ಅಪಮಾನ ಮಾಡುತ್ತಿದ್ದಾರೆ. ನಾವು ಸಂಘಟಿತರಾಗಿ ಇಂತಹ ಧರ್ಮದ್ರೋಹಿಗಳ ವಿರುದ್ಧ ಕಾನೂನು ಮಾರ್ಗವಾಗಿ ಹೋರಾಟ ಮಾಡಬೇಕಿದೆ. ಹಿಂದೂರಾಷ್ಟ್ರದ ಸ್ಥಾಪನೆಗಾಗಿ ನಾವು ಧರ್ಮಶಿಕ್ಷಣ ಪಡೆಯುವ ಸಂಕಲ್ಪವನ್ನು ಮಾಡಬೇಕು, ಹಿಂದೂರಾಷ್ಟ್ರದ ಸ್ಥಾಪನೆಯು ೨೦೨೩ ಕ್ಕೆ ಆಗಲಿದೆ. ಎಂದರು.

ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪಾಲ ಗೌಡ ಮಾಡಿದರು. ಸಭೆಯ ಸೂತ್ರಸಂಚಾಲನೆಯನ್ನು ಕು. ಚೇತನಾ ಮಾಡಿದರು.

ಸಭಾಂಗಣದಲ್ಲಿ ಧಾರ್ಮಿಕ ಆಚರಣೆಗಳ ಮೌಲ್ಯವನ್ನು ಸಮಾಜಕ್ಕೆ ತಿಳಿಸಿಕೊಡುವ ಸನಾತನದ ಗ್ರಂಥಗಳ ಮಾರಾಟ ಮತ್ತು ಪ್ರದರ್ಶನ, ಧರ್ಮಶಿಕ್ಷಣವನ್ನು ತಿಳಿಸಿಕೊಡುವ ಫ್ಲೆಕ್ಸ್ ಪ್ರದರ್ಶನ ಏರ್ಪಡಿಸಲಾಗಿತ್ತು.

Leave a Response