Monday, January 20, 2025
ಸುದ್ದಿ

ವೈರಲ್ ಆಯ್ತು ಸಿಂಪಲ್ ‘ರಾಕಿಂಗ್’ ಸೆಲ್ಫಿ – ಕಹಳೆ ನ್ಯೂಸ್

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ‘ಕೆಜಿಎಫ್ ಚಾಪ್ಟರ್ 2’ಗಾಗಿ ಅತೀವ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಇನ್ನೂ ಕೂಡ ಚಿತ್ರದ ಶೂಟಿಂಗ್ ಶುರುವಾಗಿಯೇ ಇಲ್ಲ. ಮೇ ತಿಂಗಳಲ್ಲಿ ಚಿತ್ರೀಕರಣ ಶುರುವಾಗುತ್ತೆ ಎಂದು ಹೇಳಿತ್ತಾದರೂ, ಯಾವುದೇ ರೀತಿಯ ಮಾಹಿತಿ ಚಿತ್ರತಂಡದಿಂದ ಬರದ ಕಾರಣ ಅಭಿಮಾನಿಗಳು ಬೇಸರದಿಂದಿದ್ದರು. ಇದಕ್ಕೆ ಸರಿಯಾಗಿ ಇತ್ತೀಚಿಗೆ ಚಿತ್ರತಂಡ ಎಕ್ಸೈಟಿಂಗ್ ಎಂಬಂತೆ ಮಾಹಿತಿ ನೀಡಲಿದ್ದೇವೆ ಎಂದು ತಿಳಿಸಿದ್ದರು. ಮತ್ತೆ ನೋಡಿದಾಗ ಅದು ಆಡಿಷನ್ ಬಗೆಗಿನ ಮಾಹಿತಿಯಾಗಿತ್ತು. ಅದಕ್ಕೂ ಭರ್ಜರಿಯಾಗಿ ಸ್ಪಂದನೆ ಸಿಕ್ಕಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಾದ ಮೇಲೆ ಕೆಜಿಎಫ್ ವಿತರಕ ಕಾರ್ತಿಕ್ ಗೌಡ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಬ್ಬರ ಹುಟ್ಟುಹಬ್ಬದ ಸಂದರ್ಭದಲ್ಲಿಯೂ ಅಭಿಮಾನಿಗಳು, ಶುಭಾಷಯ ಕೋರಿ ಚಿತ್ರದ ಬಗೆಗಿನ ಏನಾದರು ಮಾಹಿತಿ ನೀಡುವಂತೆ ಕೇಳಿಕೊಂಡಿದ್ದರು. ಆದರೇನು ಪ್ರಯೋಜನವಾಗಿರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ರೆ ಇದೀಗ ಅನಿರೀಕ್ಷಿತವಾಗಿ ಯಶ್ ಕೂದಲುಗಳನ್ನು ಬಿಟ್ಟುಕೊಂಡು, ಸೆಲ್ಫಿಯೊಂದನ್ನು ಪೋಸ್ಟ್ ಮಾಡಿದ್ದರು. ಆ ಸೆಲ್ಫಿಯೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕೆಜಿಎಫ್ ಚಾಪ್ಟರ್ 1 ರ ಚಿತ್ರೀಕರಣ ಸಂದರ್ಭದಲ್ಲೂ ಇದೇ ರೀತಿಯ ಸೆಲ್ಫಿಯೊಂದು ಭಾರೀ ಸದ್ದು ಮಾಡಿತ್ತು. ಆದರೆ ಆ ಸೆಲ್ಫಿ ಕೆಜಿಎಫ್ ಚಿನ್ನದ ಗಣಿಯ ಹಿನ್ನಲೆಯಲ್ಲಿ ತೆಗೆದದ್ದಾಗಿತ್ತು. ಈ ಸೆಲ್ಫಿ ಒಳಾಂಗಣದಲ್ಲಿ ತೆಗೆದಂತೆ ಗೋಚರವಾಗುತ್ತಿದೆ.