ಬೆಂಗಳೂರು: ಮೌನೇಶ್ ಬಡಿಗೇರ್ ನಿರ್ದೇಶನದ ಸೂಜಿದಾರ ಸಿನಿಮಾ ಇವತ್ತು ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ವಿಡಿಯೋವೊಂದನ್ನು ಹರಿಬಿಟ್ಟಿದೆ. ಆ ವಿಡಿಯೋದಲ್ಲಿ ಸಿನಿಮಾದಲ್ಲಿನ ನಟ ಯಶ್‍ವಂತ್ ಶೆಟ್ಟಿ ರಾತ್ರಿ ಹೊತ್ತು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂದು ಪರಿಪಾಟಲು ಪಟ್ಟ ದೃಶ್ಯಗಳಿವೆ. ಯಶ್ ಗಡ್ಡ , ಹೇರ್‌ಸ್ಟೈಲ್ ನೋಡಿ ಅನುಮಾನ ಪಡುವ ದೃಶ್ಯ ಕೊನೆಗೂ ಸಿನಿಮಾ ನೋಡಿ ಅಂತಾ ಪೊಲೀಸರಿಗೆ ಮನವಿ ಮಾಡೋ ಮೂಲಕ ಮುಕ್ತಾಯಗೊಳ್ಳುತ್ತದೆ.
ಸಿನಿಮಾದ ಪ್ರಮೋಷನ್‍ಗಾಗಿ ಈ ವಿಡಿಯೋ ಮಾಡಲಾಗಿದೆ ಅಂತಾ ಹೇಳಲಾಗುತ್ತಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ. ಆದರೆ ಸಿನಿಮಾಕ್ಕೂ ಈ ವಿಡಿಯೋಕ್ಕೂ ಏನಾದರೂ ಲಿಂಕ್ ಇದ್ಯಾ ಅನ್ನೋದು ಸಿನಿಮಾ ನೋಡಿದ ಮೇಲಷ್ಟೇ ತಿಳಿಯಲಿದೆ.